ಬೆಂಗಳೂರು: ಕೆಎಸ್ಆರ್ಟಿಸಿ ಮುಂಗಡ ಟಿಕೆಟ್ ಬುಕಿಂಗ್ ಮತ್ತು ಕಾರ್ಗೋ ಬುಕಿಂಗ್ ವ್ಯವಸ್ಥೆ ಒಂದೇ ಕಡೆ ಸಿಗುವಂತೆ ಮಾಡಿರುವ ಅವತಾರ್ ತಂತ್ರಾಂಶ ಮೊಬೈಲ್ ಅಪ್ಲಿಕೇಶನ್ ಅನ್ನು ಅವತಾರ್ 4.0 ಮೇಲ್ದರ್ಜೆಗೇರಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಕೆಎಸ್ಆರ್ಟಿಸಿ ಬಸ್ ಗಳ ಟಿಕೆಟ್ ಗಳನ್ನು ನಿಗದಿತ ಬುಕಿಂಗ್ ಕೌಂಟರ್ ಅಥವಾ ವೆಬ್ಸೈಟ್ ನಲ್ಲಿ ಕಾಯ್ದಿರಿಸಬೇಕಿದೆ. ಇದನ್ನು ಮತ್ತಷ್ಟು ಸುಲಭ ಮತ್ತು ಉತ್ತಮವಾಗಿಸಲು ಅವತಾರ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಅವತಾರ್ 4.0ಗೆ ಬದಲಾಯಿಸಲಾಗುತ್ತಿದೆ.
ಇದರಿಂದ ಅವತಾರ್ ಆ್ಯಪ್ ಅನ್ನು ಮೇಲ್ದರ್ಜೆಗೇರಿಸಿ ಅದರಲ್ಲಿ ಟಿಕೆಟ್ ಜೊತೆಗೆ ಕಾರ್ಗೋ ಬುಕಿಂಗ್ ಸೌಲಭ್ಯ ಕಲ್ಪಿಸಲಾಗುವುದು. ಸದ್ಯ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಸರಕು ಸಾಗಿಸಲು ಕೆಎಸ್ಆರ್ಟಿಸಿ ನಿಗದಿ ಮಾಡಿದ ಕೌಂಟರ್ ಗಳಿಗೆ ತೆರಳಿ ಬುಕ್ ಮಾಡಬೇಕಿದೆ. ಸರಕು ನಿಗದಿತ ಸ್ಥಳ ತಲುಪಿರುವ ತಿಳಿಯಲು ನಮ್ಮ ಕಾರ್ಗೋ ವೆಬ್ಸೈಟ್ ನಲ್ಲಿ ಪರಿಶೀಲಿಸಬಹುದು.
ಇದರ ಹೊರತಾಗಿ ಅವತಾರ್ ಮೊಬೈಲ್ ಆ್ಯಪ್ ನಲ್ಲಿ ಅವಕಾಶವಿಲ್ಲ. ಇದೀಗ ಅವತಾರ್ 4.0 ಮೊಬೈಲ್ ಆ್ಯಪ್ ಮತ್ತು ಕೆಎಸ್ಆರ್ಟಿಸಿ ವೆಬ್ಸೈಟ್ ನಲ್ಲಿ ಟಿಕೆಟ್ ಬುಕಿಂಗ್, ಕಾರ್ಗೋ ಬುಕಿಂಗ್, ಟ್ರ್ಯಾಕಿಂಗ್ ವ್ಯವಸ್ಥೆ ಇರಲಿದೆ. ಅಲ್ಲದೆ, ಟಿಕೆಟ್ ಬುಕ್ ಮಾಡುವ ಜೊತೆಗೆ ಕೆ.ಎಸ್.ಆರ್.ಟಿ.ಸಿ.ಯ ಎಲ್ಲಾ ಬಸ್ ಗಳ ಮಾಹಿತಿ, ಕಾರ್ಗೋ ಟ್ರ್ಯಾಕಿಂಗ್ ವ್ಯವಸ್ಥೆ ಅವತಾರ್ 4.0 ಮೊಬೈಲ್ ಆ್ಯಪ್ ನಲ್ಲಿರಲಿದೆ.