ಕೇಸರಿ ಕೊಬ್ಬರಿ ಮಿಠಾಯಿ ಮಾಡಲು ಕೆಲವು ಸುಲಭ ಸಾಮಗ್ರಿಗಳು ಸಾಕು.
ಕಾಯಿ ತುರಿ ಒಂದು ಬಟ್ಟಲು, ಇದಕ್ಕೆ ಸಮಪ್ರಮಾಣದಲ್ಲಿ ಸಕ್ಕರೆ ಒಂದು ಬಟ್ಟಲು, ಏಲಕ್ಕಿ ಪುಡಿ ಅರ್ಥ ಚಮಚ, ಕೇಸರಿ ದಳ 6-7.
ಕೇಸರಿಯನ್ನು ಎರಡು ಚಮಚ ಹಾಲಿನಲ್ಲಿ 5 ನಿಮಿಷ ನೆನೆಸಿಡಿ.
ಮಂದವಾದ ಸಕ್ಕರೆ ಪಾಕ ತೆಗೆದು ಇದಕ್ಕೆ ಏಲಕ್ಕಿ ಪುಡಿ, ನೆನೆಸಿದ ಕೇಸರಿ ದಳಗಳನ್ನ ಹಾಕಿ ಕೂಡಿಸಿ. ನಂತರ ಕಾಯಿತುರಿ ಹಾಕಿ ಮಂದಉರಿಯಲಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾಗುವ ಹೊತ್ತಿಗೆ ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ, ಬೇಕಾದ ಆಕಾರಕ್ಕೆ ಕತ್ತರಿಸಿ. ಸವಿಯಿರಿ.