ಬೆಂಗಳೂರು : ಸ್ಯಾಂಡಲ್ ವುಡ್ ನಿರ್ದೇಶಕ ಜಾಕೋಬ್ ವರ್ಗೀಸ್ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.
ಹೌದು. ಪೃಥ್ವಿ, ಸವಾರಿ, ಚಂಬಲ್ ಸಿನಿಮಾ ನಿರ್ದೇಶಕರಾದ ಜಾಕೋಬ್ ವರ್ಗೀಸ್ ವಿರುದ್ಧ ದೂರು ದಾಖಲಾಗಿದೆ.
ನಿರ್ದೇಶಕರ ವಿರುದ್ಧ ಸಾಕ್ಷ್ಯಚಿತ್ರದ ಕಾಪಿರೈಟ್ಸ್ ನೀಡದೆ ಬೆಂಗಳೂರು ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ಗೆ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎಚ್ಐವಿ ಪೀಡಿತ ಮಕ್ಕಳ ಜೀವನದ ಬಗ್ಗೆ ಸಂಸ್ಥೆ ಜಾಕೋಬ್ ಬಳಿ ವಿಡಿಯೋ ಮಾಡಿಸಿತ್ತು. ರನ್ನಿಂಗ್ ಪಾಸಿಟಿವ್ ಎನ್ನುವ ಸಾಕ್ಷ್ಯಚಿತ್ರ ಮಾಡಲು ಫೌಂಡೇಶನ್ ಹಣ ನೀಡಿತ್ತು. ವಿದ್ಯಾರ್ಥಿಗಳ ಬಗ್ಗೆ ವಿಡಿಯೋ ಚಿತ್ರಿಕರಣ ಮಾಡಿದ್ದ ಜಾಕೋಬ್ಗೆ ವಿಡಿಯೋ ಚಿತ್ರೀಕರಣ ಮಾಡಲು ಹಂತ ಹಂತವಾಗಿ ಫೌಂಡೇಶನ್ ಹಣ ನೀಡಿತ್ತು. ಇದೀಗ ಕಾಪಿರೈಟ್ಸ್ ಸಂಸ್ಥೆಗೆ ನೀಡದೆ ತಾನೇ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿರುವ ಆರೋಪ ಬಂದಿದೆ.ಅಲ್ಲದೇ ಆಸ್ಕರ್ ಅಕಾಡೆಮಿ ಅವಾರ್ಡ್ ವಿಭಾಗದಲ್ಲಿ ತಾನೇ ಕಾಪಿರೈಟ್ಸ್ ಮಾಲೀಕ ಎಂದು ಇವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ, ಈ ಹಿನ್ನೆಲೆ ಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಸಂಸ್ಥೆ ಪ್ರಕರಣ ದಾಖಲಿಸಿದೆ.