ದೀಪಾವಳಿ ಹೊತ್ತಲ್ಲೇ ಸಿಹಿ ಸುದ್ದಿ: ‘ಉಜ್ವಲ’ LPG ಸಿಲಿಂಡರ್ ಸಬ್ಸಿಡಿ ಮೊತ್ತ ಹೆಚ್ಚಳ ಸಾಧ್ಯತೆ

ನವದೆಹಲಿ: ದೀಪಾವಳಿಗೆ ಹಬ್ಬದ ಮೊದಲೇ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ.

ಎಲ್‌ಪಿಜಿ ಸಿಲಿಂಡರ್‌ ಗಳ ಸಬ್ಸಿಡಿ ಮೊತ್ತ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಮತ್ತು ಹಬ್ಬದ ಸೀಸನ್‌ಗಳ ಮಧ್ಯೆ ಯೋಜನೆ(ಉಜ್ವಲ ಯೋಜನೆ) ಫಲಾನುಭವಿಗಳಿಗೆ ಪರಿಹಾರ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ, ಈ ಫಲಾನುಭವಿಗಳು ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳ ಮೇಲೆ 300 ರೂ. ಪಡೆಯುತ್ತಿದ್ದಾರೆ. ಅಕ್ಟೋಬರ್ 4 ರಂದು ಕೇಂದ್ರ ಸಚಿವ ಸಂಪುಟವು 9.5 ಕೋಟಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 100 ರೂ.ಗಳ ಸಹಾಯಧನವನ್ನು ಅನುಮೋದಿಸಿತ್ತು. ಅದಕ್ಕೂ ಮೊದಲು ಸೆಪ್ಟೆಂಬರ್‌ನಲ್ಲಿ, ದೇಶಾದ್ಯಂತ ಎಲ್ಲಾ ಸಾಮಾನ್ಯ ಗ್ರಾಹಕರಿಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನಲ್ಲಿ 200 ರೂ. ಸಬ್ಸಿಡಿಯನ್ನು ಸರ್ಕಾರ ಅನುಮೋದಿಸಿತ್ತು.

ಪ್ರಸ್ತುತ, ಉಜ್ವಲ ಯೋಜನೆಯ ಫಲಾನುಭವಿಗಳು ಸಿಲಿಂಡರ್‌ಗೆ 603 ರೂಪಾಯಿಗಳನ್ನು ಪಾವತಿಸುತ್ತಾರೆ. ಬಡವರಿಗಾಗಿ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭಿಸಲಾಯಿತು. ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಇತ್ತೀಚೆಗೆ 2024-26 ನೇ ಸಾಲಿಗೆ 7.5 ಕೋಟಿ ರೂ. ಮತ್ತು ಹೆಚ್ಚುವರಿಯಾಗಿ 1650 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read