ಬೆಂಗಳೂರು: ರಾಜಧಾನಿ ಬೆಂಗಳೂರಿನ ಶಾಪಿಂಗ್ ತಾಣವಾಗಿದ್ದ ಜಯನಗರದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ. ಹಲವಾರು ವರ್ಷಗಳಿಂದ ಈ ಭಾಗದಲ್ಲಿ ವ್ಯಾಪಾರ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ.
ಜಯನಗರದಲ್ಲಿನ ರಸ್ತೆಬದಿಯ ಅಂಗಡಿ ಮುಂಗಟ್ಟುಗಳು, ಬೀದಿಬದಿ ವ್ಯಾಪಾರಿಗಳನ್ನು ಬಿಬಿಎಂಪಿ ತೆರವುಗೊಳಿಸುತ್ತಿದೆ. ಇದನ್ನು ಕಂಡ ವ್ಯಾಪಾರಿಯೊಬ್ಬರು ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೃಷ್ಣ ಮೃತ ವ್ಯಾಪಾರಿ. ಕಳೆದ 25 ವರ್ಷಗಳಿಂದ ಜಯನಗರದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಈಗ ಏಕಾಏಕಿ ಪೊಲೀಸ್ ಭದ್ರತೆಯಲ್ಲಿ ಬಿಬಿಎಂಪಿಯವರು ಅಂಗಡಿ ತೆರವುಗೊಳಿಸಿದ್ದಾರೆ. ಇದರಿಂದ ಶಾಕ್ ಆದ ಕೃಷ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಿಬಿಎಂಪಿ ಅಧಿಕಾರಿಗಳ ಕಾರ್ಯವೈಖರಿಗೆ ಕೃಷ್ಣ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.