ಬೆಂಗಳೂರು : ಇಂದಿನ ಕಾಲದಲ್ಲಿ ಪ್ರಮುಖವಾದ ಕೆಲಸಗಳನ್ನು ಮೊಬೈಲ್ ಮೂಲಕವೇ ಮಾಡುತ್ತೇವೆ. ಮೊಬೈಲ್ ನಿಂದ ಎಷ್ಟು ಪ್ರಯೋಜನಗಳಿದಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಸೈಬರ್ ವಂಚಕರು ಹಲವಾರು ರೀತಿಯಲ್ಲಿ ವಂಚನೆಯನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಈ ನಡುವೆ ಕರೆಂಟ್ ಬಿಲ್ ಹೆಸರಿನಲ್ಲು ಕರೆ ಮಾಡಿ ಮಾಹಿತಿ ಪಡೆದು ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಖಾಲಿ ಮಾಡುತ್ತಿದ್ದಾರೆ.
ಹೌದು, ವಿದ್ಯುತ್ ಬಿಲ್ ಹೆಸರಲ್ಲಿ ಜನರನ್ನು ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿಬೆಳಕಿಗೆ ಬಂದಿದೆ. ವಿದ್ಯುತ್ ಬಿಲ್ ಬಾಕಿ ಇದ್ದರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತೀವಿ ಎಂದು ಹೆದರಿಸಿ ಹಣ ದೋಚಿರುವ ಘಟನೆ ನಡೆದಿದೆ.
ಬೆಂಗಳೂರಿನ ಜಯನಗರ ನಿವಾಸಿ ಕೇಶವ್ ಕುಮಾರ್ ಎಂಬುವರಿಗೆ ಕರೆ ಮಾಡಿದ ವಂಚಕರು ನೀವು ವಿದ್ಯುತ್ ಬಿಲ್ ಕಟ್ಟಿಲ್ಲ. ಕರೆಂಟ್ ಕಟ್ ಮಾಡುತ್ತೇವೆ ಎಂದು ಮೆಸೇಜ್ ಬಂದಿದೆ. ಕರೆಂಟ್ ಕಟ್ ಆಗುತ್ತದೆ ಎನ್ನುವ ಭಯಕ್ಕೆ ಮೆಸೇಜ್‌ನಲ್ಲಿದ್ದ ನಂಬರ್ ಗೆ ಪೇಟಿಎಂ ಮಾಡಿದ ತಕ್ಷಣ ಫೋನ್ ಹ್ಯಾಕ್ ಮಾಡಿದ್ದಾರೆ. ಪಾಸ್‌ವರ್ಡ್ ತಿಳಿದುಕೊಂಡು ಖಾತೆಯಿಂದ 15,000 ಹಣ ಎಗರಿಸಿದ್ದಾರೆ.