ಚಹಾ ನೀಡದಿದ್ದಕ್ಕೆ ಸಿಟ್ಟು: ಆಪರೇಷನ್ ಥಿಯೇಟರ್‌ನಿಂದ ಮಧ್ಯದಲ್ಲೇ ಹೊರನಡೆದ ಡಾಕ್ಟರ್

ನಾಗ್ಪುರ: ಚಹಾ ನೀಡಿದ್ದಕ್ಕೆ ಕೋಪಗೊಂಡ ವೈದ್ಯರೊಬ್ಬರು ಆಪರೇಷನ್ ಥಿಯೇಟರ್‌ನಿಂದ ಮಧ್ಯದಲ್ಲೇ ಹೊರನಡೆದಿರುವ ಆಘಾತಕಾರಿ ಘಟನೆ ನಾಗ್ಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಅರಿವಳಿಕೆ ಚುಚ್ಚುಮದ್ದು ಪಡೆದ ನಾಲ್ವರು ಮಹಿಳೆಯರನ್ನು ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿದ್ದ ನಾಲ್ವರು ಮಹಿಳೆಯರನ್ನು ಬಿಟ್ಟು ವೈದ್ಯರೊಬ್ಬರು ಆಪರೇಷನ್ ಥಿಯೇಟರ್‌ನಿಂದ ಮಧ್ಯದಲ್ಲೇ ಹೊರನಡೆದಿದ್ದಾರೆ. ಆಪರೇಷನ್ ಥಿಯೇಟರ್‌ಗೆ ಬರುವ ಮೊದಲು ಆರ್ಡರ್ ಮಾಡಿದ್ದ ಚಹಾವನ್ನು ನೀಡದ ಕಾರಣ ವೈದ್ಯರು ಈ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ನಾಗ್ಪುರದ ಖಾತ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ತೇಜ್ರಾಮ್ ಭಾಲವಿ ಅವರ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತವು ತ್ರಿಸದಸ್ಯ ತನಿಖಾ ಸಮಿತಿಯನ್ನು ರಚಿಸಿದೆ. ವರದಿಗಳ ಪ್ರಕಾರ, ಶಸ್ತ್ರಚಿಕಿತ್ಸೆ ಮಾಡುವ ಮೊದಲು ಡಾ. ಭಾಲವಿ ಟೀ ಕೇಳಿದ್ದರು. ಆದರೆ, ಬಹಳ ಹೊತ್ತು ಕಾದರೂ ಚಹಾ ಬಂದಿರಲಿಲ್ಲ. ನಾಲ್ವರು ಮಹಿಳಾ ರೋಗಿಗಳಿಗೆ ಈಗಾಗಲೇ ಅರಿವಳಿಕೆ ನೀಡಲಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಸಿದ್ಧರಾಗಿದ್ದರು. ಆದರೆ, ಅಷ್ಟರಲ್ಲೇ ವೈದ್ಯರು ಆಪರೇಷನ್ ಥಿಯೇಟರ್‌ನಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಕೊನೆಗೆ ಜಿಲ್ಲಾಡಳಿತ ಮತ್ತೊಬ್ಬ ವೈದ್ಯರನ್ನು ವ್ಯವಸ್ಥೆ ಮಾಡಿದ್ದು, ಡಾ.ಭಾಲವಿ ಅವರ ಜಾಗದಲ್ಲಿ ಮತ್ತೊಬ್ಬರು ಶಸ್ತ್ರಚಿಕಿತ್ಸೆ ನೆರವೇರಿಸಿದ್ರು. ಘಟನೆ ಬೆಳಕಿಗೆ ಬಂದ ನಂತರ ಕರ್ತವ್ಯ ಲೋಪವೆಸಗಿರುವ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ವಿವಿಧೆಡೆಯಿಂದ ಆಗ್ರಹಗಳು ವ್ಯಕ್ತವಾದವು. ಈ ಆರೋಪವನ್ನು ಗಮನಿಸಿದ ಜಿಲ್ಲಾ ಪರಿಷತ್ ಆಡಳಿತವು ಈ ಬಗ್ಗೆ ತನಿಖೆಗೆ ಆದೇಶಿಸಿ ತನಿಖಾ ತಂಡವನ್ನು ರಚಿಸಿದೆ.

ತನಿಖಾ ಸಮಿತಿಯಿಂದ ಡಾ.ಭಾಲವಿ ತಪ್ಪಿತಸ್ಥರೆಂದು ಕಂಡುಬಂದರೆ ಜಿಲ್ಲಾ ಪರಿಷತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ಉಪಾಧ್ಯಕ್ಷ ರಾವತ್ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read