HomeKarnatakaಅಧಿಕಾರಿಗೆ ನಗ್ನ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್; ದೂರು ದಾಖಲು

ಅಧಿಕಾರಿಗೆ ನಗ್ನ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್; ದೂರು ದಾಖಲು

ರಾಯಚೂರು: ಅಧಿಕಾರಿಗೆ ನಗ್ನ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಹಟ್ಟಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಟ್ಟಿ ಚಿನ್ನದ ಗಣಿ ಸಿನಿಯರ್ ಗೇಜ್ ಆಪರೇಟರ್ ಗೆ ಸೈಬರ್ ವಂಚಕರು ಕಳೆದ ಒಂದು ವರ್ಷದಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರಂತೆ ಇದರಿಂದ ನೊಂದ ಸಿನಿಯರ್ ಗೇಜ್ ಆಪರೇಟರ್ ಮಹೇಂದ್ರ ಕುರ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಣಿಯೊಳಗೆ ಕೆಲಸ ಮಾಡುತ್ತಿದ್ದ ಮಹೇಂದ್ರ ಅವರಿಗೆ ಕಳೆದ ವರ್ಷ ಮೊಬೈಲ್ ಗೆ ಒಂದು ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿದ್ದರಂತೆ. ಮಹೇಂದ್ರ ವಿಡಿಯೋ ಕಾಲ್ ನಲ್ಲಿ ನಗ್ನ ಸ್ಥಿತಿಯಲ್ಲಿರುವ ಯುವತಿ ಜೊತೆ ಮಾತನಾಡುತ್ತಿರುವಂತೆ ವಿಡಿಯೋ ಕ್ರಿಯೇಟ್ ಮಾಡಿ ದುಷ್ಕರ್ಮಿಗಳು ಕಳುಹಿಸಿದ್ದಾರಂತೆ. ಈ ವಿಡಿಯೋ ಇಟ್ಟುಕೊಂಡು ಆರೋಪಿಗಳು ಕಳೆದ ಒಂದು ವರ್ಷದಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರಂತೆ.

ನಿರಂತರ ಬ್ಲ್ಯಾಕ್ ಮೇಲ್ ಗೆ ಬೇಸತ್ತ ಮಹೇಂದ್ರ, ಹಟ್ಟಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular