HomeKarnatakaಯಜಮಾನಿಯರಿಗೆ ಗುಡ್ ನ್ಯೂಸ್ : ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿದ್ರೆ ಒಂದೇ ಸಲ ಸಿಗಲಿದೆ...

ಯಜಮಾನಿಯರಿಗೆ ಗುಡ್ ನ್ಯೂಸ್ : ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿದ್ರೆ ಒಂದೇ ಸಲ ಸಿಗಲಿದೆ `ಗೃಹಲಕ್ಷ್ಮಿ’ ಯ 3 ಕಂತಿನ ಹಣ!

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿ ಈವರೆಗೆ ಹಣ ಬಾರದೆ ಇರುವ ಯಜಮಾನಿಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದು, ಕೆಲ ದಾಖಲೆಗಳನ್ನು ಸರಿಪಡಿಸಿ ಒಂದೇ ಸಲ 3 ಕಂತಿನ 6 ಸಾವಿರ ರೂಪಾಯಿಗಳನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.  

ಈ ಕುರಿತು ಮಾಹಿತಿ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಕಳೆದ ತಿಂಗಳು ರಾಜ್ಯಾದ್ಯಂತ 1.10 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ವರ್ಗಾವಣೆ ಮಾಡಲಗಿದೆ. ಆದರೆ ಕೆಲವು ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ ಎಂಬ ದೂರುಗಳು ಬರುತ್ತಿವೆ. ಇ-ಕೆವೈಸಿ, ತಾಂತ್ರಿಕ ಸಮಸ್ಯೆ, ಬ್ಯಾಂಕ್ ಖಾತೆ ಸೇರಿ ಯಾವೆಲ್ಲಾ ತಪ್ಪುಗಳಿದ್ದಾವೋ ಅವುಗಳನ್ನು ಸರಿಪಡಿಸಿ ಈ ತಿಂಗಳು ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿ ಸಲ್ಲಿಸಿದ್ರೂ ಯಾರಿಗೆ ಹಣ ಬಂದಿಲ್ಲೋ ಅವರಿಗೆ ಒಂದೇ ಸಲ ಹಣ ವರ್ಗಾವಣೆ ಮಾಡಲಾಗುತ್ತದೆ. ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಿದ್ರೆ 3 ಕಂತು, ಆಗಸ್ಟ್ ನಂತರ ಅರ್ಜಿ ಸಲ್ಲಿಸಿದವರಿಗೆ 2 ಕಂತು ಒಂದೇ ಸಲ ಬರಲಿದೆ.  ಹೆಸರು ತಪ್ಪಾಗಿದ್ರೆ, ಫೋನ್ ನಂಬರ್ ಬೇರೆ ಯಾಗಿದ್ರೆ ಹಣ ಜಮೆ ಆಗಿಲ್ಲ. ಇವುಗಳನ್ನು ಸರಿಪಡಿಸಿಕೊಂಡು ಗೃಹಲಕ್ಷ್ಮಿ ಹಣವನ್ನು ಪ್ರತಿ ತಿಂಗಳು 15 ರಿಂದ 20 ನೇ ದಿನಾಂಕದೊಳಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular