alex Certify Watch Video | ಮೆಟ್ರೋ ಸಿಟಿಗಾಗಿ ಕಚ್ಚಾಡಿಕೊಂಡ ಮಹಿಳೆಯರು; ಸಖತ್​ ಫನ್ನಿ ಎಂದ್ರು ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಮೆಟ್ರೋ ಸಿಟಿಗಾಗಿ ಕಚ್ಚಾಡಿಕೊಂಡ ಮಹಿಳೆಯರು; ಸಖತ್​ ಫನ್ನಿ ಎಂದ್ರು ನೆಟ್ಟಿಗರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರೋ ಮೆಟ್ರೋ ಅಲ್ಲಿನ ಜನರ ಪಾಲಿಗೆ ಜೀವನಾಡಿ ಆಗಿರುವ ಜೊತೆಯಲ್ಲಿಯೇ ಸಾಕಷ್ಟು ಬಾರಿ ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿ ಇರುತ್ತೆ. ಅತಿಯಾದ ಜನಸಂದಣಿ, ಮೆಟ್ರೋದೊಳಗೆ ಕಿತ್ತಾಟ ಹೀಗೆ ನಾನಾ ಕಾರಣಗಳಿಂದ ದೆಹಲಿ ಮೆಟ್ರೋ ಸದಾ ಸುದ್ದಿಯಲ್ಲಿರುತ್ತೆ ಇತ್ತೀಚಿನ ಘಟನೆಯೊಂದರಲ್ಲಿ ಸೀಟಿನ ವಿಚಾರಕ್ಕೆ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿದ್ದು ಈ ವಿಡಿಯೋ ಕ್ಲಿಪ್​ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.

ದೆಹಲಿ ಮೆಟ್ರೋದ ಒಳಗಡೆ ಸೀಟಿನ ವಿಚಾರಕ್ಕೆ ಇಬ್ಬರು ಮಹಿಳೆಯರು ತೀವ್ರ ಮಾತಿನ ಚಕಮಕಿ ನಡೆಸಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದರಲ್ಲಿ ಗಮನಿಸಬೇಕಾದ ವಿಚಾರ ಏನಂದ್ರೆ ಇಬ್ಬರು ಬೈದುಕೊಳ್ಳಲು ಅಯ್ಕೆ ಮಾಡಿಕೊಂಡ ಪದಗಳು. ಇಬ್ಬರು ತಮ್ಮದೇ ಆದ ​ ಇಂಗ್ಲೀಷಿನಲ್ಲಿ ಒಬ್ಬರಿಗೊಬ್ಬರು ಬೈದುಕೊಂಡಿದ್ದು ವಿಡಿಯೋ ಸಖತ್​ ಫನ್ನಿಯಾಗಿದೆ.

ಕಪ್ಪು ಕುರ್ತಾ ಧರಿಸಿದ ಮಹಿಳೆಯೊಬ್ಬರು ಪ್ರಯಾಣಿಕರ ಅನಕ್ಷರತೆಯ ಬಗ್ಗೆ ಗೇಲಿ ಮಾಡೋದ್ರಿಂದ ವಿಡಿಯೋ ಅರಂಭಗೊಳ್ಳುತ್ತೆ. ಬಳಿಕ ಇಬ್ಬರೂ ಹೆಂಗಸರು ಜಗಳ ಶುರು ಮಾಡುತ್ತಾರೆ. ಕಪ್ಪು ಉಡುಪು ಧರಿಸಿದ್ದ ಮಹಿಳೆಯು , ಓ ಹೆಲ್ಲೋ….. ನಿಮ್ಮಂಥ ಮಹಿಳೆಯೊಂದಿಗೆ ಮಾತನಾಡುವ ಮನಸ್ಥಿತಿ ನನಗಿಲ್ಲ ಎಂದು ಹೇಳುತ್ತಾಳೆ. ಇದಕ್ಕೆ ಪ್ರತ್ಯುತ್ತರ ನೀಡಿದ ಮತ್ತೋರ್ವ ಮಹಿಳೆಯು ನಿಮ್ಮಂಥ ಮಹಿಳೆ ಎಂದರೆ ಏನು..? ಕನಿಷ್ಟ ಪಕ್ಷ ನಾನು ನಿಮ್ಮಂತೆ ಮನೆಯಿಂದ ಹೊರಬಂದು ಕಂಡ ಕಂಡಲ್ಲಿ ನನ್ನ ಕೋಪವನ್ನು ಹೊರ ಹಾಕುತ್ತಿಲ್ಲ ಎಂದು ಟಾಂಗ್​ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...