ಚಾಮರಾಜನಗರ : 5 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಪಾಪಿ ತಂದೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಸೈಯದ್ ಮುಜಾಮಿಲ್ (45) ಶಿಕ್ಷೆಗೆ ಒಳಗಾದ ವ್ಯಕ್ತಿಯಾಗಿದ್ದಾನೆ. ಮನೆಯಲ್ಲಿ ಹೆಂಡತಿ ಇಲ್ಲದ ವೇಳೆ ಮಗಳ ಮೇಲೆ ಈತ ಅತ್ಯಾಚಾರ ಎಸಗಿದ್ದನು. ಬಾಲಕಿಯ ತಾಯಿಯು ಈಗಾಗಲೇ 2 ಮದುವೆ ಆಗಿದ್ದು, ಅವರಿಂದ ತಲಾಖ್ ಪಡೆದು ಸೈಯದ್ ಮುಜಾಮಿಲ್ನನ್ನು 3ನೇ ಮದುವೆಯಾಗಿದ್ದಳು. ತನ್ನ ಸ್ವಂತ ಮಗಳು ಅಲ್ಲ ಎಂಬ ಕಾರಣಕ್ಕೆ ಸೈಯದ್ ವಿಕೃತಿ ಮೆರೆದಿದ್ದಾನೆ.
ಈ ಬಗ್ಗೆ ಚಾಮರಾಜನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಈಗ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.