ಬಳ್ಳಾರಿ : ನಾನು ಸಿಎಂ, ನಾನು ಸಿಎಂ ಎಂದು ಕಾಂಗ್ರೆಸ್ ಪಕ್ಷದ 224 ಜನರೂ ಹೇಳುತ್ತಿದ್ದಾರೆ, ಕಾಂಗ್ರೆಸ್ ನಲ್ಲಿ ಇರುವವರೆಲ್ಲಾ ಸಿಎಂ ಆಗ್ತಾರಾ..? ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ಧಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ ಈಶ್ವರಪ್ಪ ‘ ರಾಜಕೀಯದಲ್ಲಿ ಇನ್ನೂ ಕಣ್ಣು ಬಿಡದ ಪ್ರಿಯಾಂಕ್ ಖರ್ಗೆ ನಾನು ಸಿಎಂ ಅಂತಿದ್ದಾರೆ, ಯಾಂಕ್ ಖರ್ಗೆ ತಂದೆ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಮಲ್ಲಿಕಾರ್ಜುನ ಖರ್ಗೆಯನ್ನೇ ಸಿಎಂ ಆಗಲು ಬಿಟ್ಟಿಲ್ಲ, ಇವರನ್ನು ಬಿಡ್ತಾರಾ? ಎಂದರು.
ಸಚಿವ ಸತೀಶ್ ಜಾರಕಿಹೊಳಿ ಕೂಡ ಸಿಎಂ ರೇಸ್ ನಲ್ಲಿ ಇದ್ದಾರೆ, ಜಿ.ಪರಮೇಶ್ವರ್ ಕೂಡ ಸಿಎಂ ಆಗಲಿ ಎಂದು ರಾಜಣ್ಣ ಹೇಳಿದ್ದಾರೆ. ನಾನು ಸಿಎಂ, ನಾನು ಸಿಎಂ ಎಂದು ಕಾಂಗ್ರೆಸ್ ಪಕ್ಷದ 224 ಜನರೂ ಹೇಳುತ್ತಿದ್ದಾರೆ, ಕಾಂಗ್ರೆಸ್ ನಲ್ಲಿ ಇರುವವರೆಲ್ಲಾ ಸಿಎಂ ಆಗ್ತಾರಾ..? ಎಂದು ಪ್ರಶ್ನಿಸಿದ್ದಾರೆ.