HomeKarnatakaಬ್ಯಾಂಕ್ ಖಾತೆ ಇದ್ದು `ಗೃಹಲಕ್ಷ್ಮಿ’ ಹಣ ಸಿಗದವರಿಗೆ ಗುಡ್ ನ್ಯೂಸ್ : ಈ ರೀತಿ ಮಾಡಿದ್ರೆ...

ಬ್ಯಾಂಕ್ ಖಾತೆ ಇದ್ದು `ಗೃಹಲಕ್ಷ್ಮಿ’ ಹಣ ಸಿಗದವರಿಗೆ ಗುಡ್ ನ್ಯೂಸ್ : ಈ ರೀತಿ ಮಾಡಿದ್ರೆ ಬರುತ್ತೆ ಹಣ!

ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಡಿ ಈಗಾಗಲೇ ರಾಜ್ಯದ ಹಲವು ಮಹಿಳೆಯರಿಗೆ 2 ನೇ ಕಂತು ಖಾತೆಗೆ ಜಮಾ ಆಗಿದ್ದು, ಬ್ಯಾಂಕ್ ಖಾತೆ ಇದ್ದು, ಖಾತೆಗೆ ಹಣ ಬಾರದೇ ಇರುವವರಿಗೆ ಸರ್ಕಾರ ಮತ್ತೊಮ್ಮೆ ಪರಿಶೀಲಿಸಿ ಹಣ ಜಮಾ ಮಾಡಲು ಸಿದ್ಧತೆ ನಡೆಸಿದೆ.

ರಾಜ್ಯದ ಯಜಮಾನಿ ಮಹಿಳೆಯರಿಗೆ ಪ್ರೋತ್ಸಾಹಿಸೋ ಸಲುವಾಗಿ ಸರ್ಕಾರ ಜಾರಿಗೆ ತಂದಿರುವಂತ ಯೋಜನೆಗಳಲ್ಲಿ ಒಂದು ಗೃಹಲಕ್ಷ್ಮಿ. ಈ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ ಮೂಲಕ ನೋಂದಾಯಿತ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಜೋಡಣೆಯಾಗದೇ ಇ-ಕೆವೈಸಿ ಅಪ್ಡೇಟ್ ಆಗದೇ ಇರುವುದರಿಂದ ಹಣ ಜಮೆಯಾಗದೇ ಇರುವವರು ತಮ್ಮ ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಆಧಾರ್ ಜೋಡಣೆ ಮತ್ತು ಇಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಹಾಗೂ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿಯನ್ವಯ ಹಾಗೂ ಪಾಸ್ಪುಸ್ತಕದಲ್ಲಿರುವ ಖಾತೆದಾರರ ಹೆಸರು ಹೊಂದಾಣಿಕೆ ಮಾಡಿಸಿಕೊಳ್ಳುವಂತೆ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಒಂದು ಕಂತಿನ ಹಣ ಕೂಡ ಪಡೆಯದವರು ತಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಗಳಿಗೆ ದಾಖಲೆಗಳನ್ನು ನೀಡಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್, ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪತ್ರದ ಪ್ರತಿಗಳನ್ನು ಸಲ್ಲಿಸಬೇಕು. ಅಧಿಕಾರಿಗಳ ಬಳಿ ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಇರುವುದರಿಂದ ಅವರು ಏನು ಸಮಸ್ಯೆಯಾಗಿದೆ ಎಂಬುದನ್ನು ಹೇಳುತ್ತಾರೆ.

ನಿಮ್ಮ ರೇಷನ್ ಕಾರ್ಡ್ ಗೆ KYC ಅಪ್ಡೇಟ್ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗುವ ಮೂಲಕ KYC ಅಪ್ಡೇಟ್ ಮಾಡಿಸಿಕೊಳ್ಳಿ.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿಕೊಂಡಿರುವ ಫಲಾನುಭವಿಗಳಲ್ಲಿ ಯಾರಿಗೆ ಮೊದಲ ಕಂತಿನ ಹಣ ಬಂದಿಲ್ಲ ಅಂತಹವರು ತಮ್ಮ ಬ್ಯಾಂಕ್ಗಳಲ್ಲಿ ಇ-ಕೆವೈಸಿ ಹಾಗೂ ಆಧಾರ್ ಜೋಡಣೆ ಮಾಡಿಕೊಂಡರೆ ಯೋಜನೆ ಹಣ ಜಮಾ ಆಗಲಿದೆ.

For Latest News Updates, Join Our Whatsapp Community🚩
RELATED ARTICLES

Most Popular