ತೂತುಕುಡಿ: ಕುಟುಂಬಗಳ ಇಚ್ಛೆಗೆ ವಿರುದ್ಧವಾಗಿ ಮೂರು ದಿನಗಳ ಹಿಂದೆಯಷ್ಟೇ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದ ದಂಪತಿಯನ್ನು ಬೈಕ್ ನಲ್ಲಿ ಬಂದ ಐದು ಜನರ ಗುಂಪು ಗುರುವಾರ ರಾತ್ರಿ ತೂತುಕುಡಿ ಪಟ್ಟಣದ ಮುರುಗೇಶನ್ ನಗರದಲ್ಲಿ ಕೊಲೆ ಮಾಡಿದೆ.
ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಮಹಿಳೆಯ ಕುಟುಂಬವು ಕೊಲೆಯಲ್ಲಿ ಭಾಗಿಯಾಗಿರಬಹುದು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಒಂದೇ ಸಮುದಾಯಕ್ಕೆ ಸೇರಿದ ದಂಪತಿಗಳಾದ ವಿ ವಿ ಮಾರಿ ಸೆಲ್ವಂ (24) ಮತ್ತು ಕಾರ್ತಿಕಾ (20) ಎರಡು ವರ್ಷಗಳ ಸಂಬಂಧದ ನಂತರ ವಿವಾಹವಾದರು. ಕಾರ್ತಿಕಾ ಅಕ್ಟೋಬರ್ 30 ರಂದು ಮಾರಿ ಸೆಲ್ವಂ ಅವರೊಂದಿಗೆ ಕೋವಿಲ್ಪಟ್ಟಿಗೆ ಓಡಿಹೋಗಿದ್ದರು. ಮತ್ತು ಅವರು ರಕ್ಷಣೆ ಕೋರಿ ಕೋವಿಲ್ಪಟ್ಟಿ ಪೂರ್ವ ಪೊಲೀಸ್ ಠಾಣೆಗೆ ಹೋದರು. ನಂತರ, ಅವರು ಅದೇ ದಿನ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾದರು ಮತ್ತು ಬುಧವಾರದವರೆಗೆ ಕೋವಿಲ್ಪಟ್ಟಿಯಲ್ಲಿದ್ದರು.
ಇದರ ನಡುವೆ ಎರಡೂ ಕುಟುಂಬಗಳಿಂದ ಮದುವೆಗೆ ಬಲವಾದ ವಿರೋಧವಿತ್ತು, ಆದಾಗ್ಯೂ, ಹುಡುಗನ ಕುಟುಂಬವು ಮಂಗಳವಾರ ಅವರ ಮದುವೆಯನ್ನು ಒಪ್ಪಿಕೊಂಡಿತು. ಕಳೆದ ಮೂರು ದಿನಗಳಿಂದ ಮರಿಚೆಲ್ವಂ ತನ್ನ ಪತ್ನಿ ಕಾರ್ತಿಕಾ ಅವರೊಂದಿಗೆ ಜಿಲ್ಲೆಯ ಮುರುಗೇಶನ್ ನಗರ ಪ್ರದೇಶದಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದರು. ರಾತ್ರಿ ಅವರು ಮಲಗಿದ್ದಾಗ ಮಾರಕಾಸ್ತ್ರಗಳೊಂದಿಗೆ ಬಂದ ಗುಂಪು ಮನೆಗೆ ನುಗ್ಗಿ ನವವಿವಾಹಿತ ದಂಪತಿಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದೆ .