HomeKarnatakaBIG NEWS: 3 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದ ಕಂದಾಯ ಇಲಾಖೆ; ಕರೆಂಟ್ ಕಟ್ ಮಾಡಿದ...

BIG NEWS: 3 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದ ಕಂದಾಯ ಇಲಾಖೆ; ಕರೆಂಟ್ ಕಟ್ ಮಾಡಿದ ಬೆಸ್ಕಾಂ

ಬೆಂಗಳೂರು: ಕಳೆದ ಮೂರು ತಿಂಗಳಿಂದ ಕರೆಂಟ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಕಂದಾಯ ಇಲಾಖೆ ಕಚೇರಿಯ ಕರೆಂಟ್ ಕಟ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮೂರು ತಿಂಗಳಿಂದ ವಿದ್ಯುತ್ ಬಿಲ್ ಕಟ್ಟದೇ ಸುಮಾರು 1 ಲಕ್ಷ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಮಲ್ಲೇಶ್ವರ ವಾರ್ಡ್ ನಂ.65ರ ನಾಡ ಕಚೇರಿ ಬಿಲ್ಡಿಂಗ್ ಗೆ ಬೆಸ್ಕಾಂ ಅಧಿಕಾರಿಗಳು ಪವರ್ ಕಟ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದೇ ಕಟ್ಟಡದಲ್ಲಿ ಬಿಬಿಎಂಪಿ ಕಂದಾಯ ಇಲಾಖೆ, ಗ್ರಂಥಾಲಯ, ನಾಡಕಚೇರಿ ಹಾಗೂ ಬಿಬಿಎಂಪಿ ಖಾತೆ ಬದಲಾವಣೆ ಹಾಗೂ ಜನನ, ಮರಣ ಪ್ರಮಾಣ ಪತ್ರ ಕಚೇರಿಗಳಿವೆ. ವಿದ್ಯುತ್ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಕೆಲಸಕ್ಕಾಗಿ ನಾಡಕಚೇರಿಗೆ ಬಂದ ಜನರು ವಾಪಾಸ್ ಆಗುವಂತಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular