ಕೇವಲ 15 ನಿಮಿಷದಲ್ಲಿ ಮಾಡಬಹುದಾದ ಹೋಂ ಮೇಡ್ ಬಿಸ್ಕಟ್ ಶಂಕರ ಪೋಳಿ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ. ಮೃದುವಾದ, ಗರಿಗರಿಯಾದ ಈ ತಿನಿಸು ಮಕ್ಕಳಿಗೂ ಇಷ್ಟವಾಗುತ್ತದೆ.
ಒಂದು ಕಪ್ ಮೈದಾ ಹಿಟ್ಟು
ಕಾಲು ಕಪ್ ಸಕ್ಕರೆ ಪುಡಿ
ಅರ್ಧ ಕಪ್ ತುಪ್ಪ
ಒಂದು ಚಮಚ ಜೀರಿಗೆ ಅಥವಾ ಓಂ ಕಾಳು
ಉಪ್ಪು ರುಚಿಗೆ
ಅಚ್ಚ ಖಾರದ ಪುಡಿ – ಒಂದೆರಡು ಚಮಚ
ಕರಿಯಲು ಎಣ್ಣೆ
ಶಂಕರ ಪೋಳಿ ತಯಾರಿಸುವ ವಿಧಾನ
ಒಂದು ಕಪ್ ಮೈದಾ ಹಿಟ್ಟಿನಲ್ಲಿ ಎಡರು ಭಾಗ ಮಾಡಿ ಒಂದಕ್ಕೆ ಸಕ್ಕರೆ ಪುಡಿ, ಮತ್ತೊಂದಕ್ಕೆ ಅಚ್ಚ ಖಾರದ ಪುಡಿ ಹಾಗೂ ಜೀರಿಗೆ ಅಥವಾ ಓಂ ಕಾಳು ಹಾಕಿ. ಬಿಸಿ ಮಾಡಿ ಕರಗಿಸಿದ ತುಪ್ಪವನ್ನು ಮೈದಾ ಹಿಟ್ಟಿಗೆ ಹಾಕಿ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲೆಸಿಕೊಳ್ಳಿ. ಚೆನ್ನಾಗಿ ನಾದಿ, 10 ನಿಮಿಷ ನೆನೆಯಲು ಬಿಡಿ.
ನಂತರ ಸಿಹಿ ಮತ್ತು ಖಾರ ಎರಡೂ ಹಿಟ್ಟನ್ನು ತೆಗೆದುಕೊಂಡು ಪ್ರತ್ಯೇಕವಾಗಿ ಲಟ್ಟಿಸಿ, ಡೈಮಂಡ್ ಆಕಾರಕ್ಕೆ ಕತ್ತರಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ.
ಸಂಜೆಯ ಸಮಯದಲ್ಲಿ ಕಾಫಿ ಜೊತೆಗೆ ಇದು ಒಳ್ಳೆಯ ಕಾಂಬಿನೇಶನ್.