ಸಮುದ್ರದ ಮಧ್ಯಭಾಗದಲ್ಲಿ ತೇಲಿದ ಮನೆ; ತಲೆಯಲ್ಲಿ ಹುಳಬಿಟ್ಟುಕೊಂಡ ನೆಟ್ಟಿಗರು | Watch Video 01-11-2023 6:56AM IST / No Comments / Posted In: Latest News, Live News, International ಹೌಸ್ಬೋಟ್ಗಳ ಪರಿಕಲ್ಪನೆಯು ಬಹಳ ಹಿಂದಿನ ಕಾಲದಿಂದಲೂ ಇದೆ. ಪ್ರಾಚೀನ ಮತ್ತು ಮಧ್ಯಕಾಲೀನ ಕಾಲದಿಂದಲೂ ಜನರು ಸಂಪತ್ತು, ಚಿನ್ನ ಹಾಗೂ ಹೊಸ ದೇಶಗಳ ಅನ್ವೇಷಣೆಯಲ್ಲಿ ನೌಕಾಯಾನ ಮಾಡುತ್ತಿದ್ದರು. ಆದರೆ ಈಗೀಗ ತೆಲುವ ಮನೆಗಳು ಅಭಿವೃದ್ಧಿಗೊಂಡಿವೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಮುದ್ರದಲ್ಲೊಂದು ತೇಲುತ್ತಿರುವ ಮನೆ ಕಾಣಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸಮುದ್ರದಲ್ಲಿ ಮಧ್ಯಮ ಗಾತ್ರದ ಹಡಗಿನ ಮೇಲೆ ಚಲಿಸುತ್ತಿದ್ದ ನಾವಿಕರ ಕಣ್ಣಿಗೆ ಈ ತೇಲುವ ಮನೆ ಬಿದ್ದಿದೆ. ಎಕ್ಸ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಇದೊಂದು ಅತ್ಯಂತ ವಿಚಿತ್ರವಾದ ಸನ್ನಿವೇಶದಂತೆ ಗೋಚರವಾಗುತ್ತಿದೆ. ಒಂದು ಮನೆ ಸಮುದ್ರದಲ್ಲಿ ತೇಲಲು ಹೇಗೆ ಸಾಧ್ಯ..? ಸಮುದ್ರದಲ್ಲಿ ಮನೆ ಮುಳುಗಿ ಹೋಗಬಹುದು ಅಥವಾ ಅಲೆಗಳ ರಭಸಕ್ಕೆ ನಾಶವಾಗಿ ಹೋಗಬಹುದು. ಆದರೆ ಈ ಮನೆ ಅದೇಗೆ ತೇಲುತ್ತಿದೆ ಅಂತಾ ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಅನೇಕರು ಈ ವಿಡಿಯೋಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಈಗಾಗಲೇ 2 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ. 😳😳 pic.twitter.com/JEGLEqlUW8 — Wow Terrifying (@WowTerrifying) October 28, 2023