ಮಂಗಳವಾರ ಮಧ್ಯಾಹ್ನ ಮಧ್ಯಪ್ರದೇಶದ ದಾಮೋಹ್ ನಲ್ಲಿರುವ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ.
ರಾಜ್ಯದ ರಾಜಧಾನಿ ಭೋಪಾಲ್ ನಿಂದ 250 ಕಿಮೀ ದೂರದಲ್ಲಿರುವ ನಗರದ ನಾರ್ಯ ಬಜಾರ್ ಪ್ರದೇಶದಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ.
ಸ್ಫೋಟವು ಎಷ್ಟು ಪ್ರಬಲವಾಗಿದೆ ಎಂದರೆ ಅದು ಅಕ್ರಮವಾಗಿ ನಡೆಸುತ್ತಿದ್ದ ಕಾರ್ಖಾನೆಯ ಮೇಲ್ಛಾವಣಿಯನ್ನು ಸ್ಫೋಟಿಸಿತು ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ಸುನಿಲ್ ತಿವಾರಿ ಹೇಳಿದ್ದಾರೆ.
ಮೃತರನ್ನು ಅಭಯ್ ಗುಪ್ತಾ (42), ಅಪೂರ್ವ್ ಖಟಿಕ್ (19) ಮತ್ತು ರಿಂಕಿ ಕೋರಿ (30) ಎಂದು ಗುರುತಿಸಲಾಗಿದೆ.
ಗಾಯಗೊಂಡಿರುವ ಹತ್ತು ಮಂದಿ ಮಹಿಳೆಯರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮಯಾಂಕ್ ಅಗರವಾಲ್ ಭೇಟಿ ನೀಡಿ ಘಟನೆಯ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.