
ಆದರೆ ಭಾರತದ ಪ್ರಜೆಗಳು ವೀಸಾ ಇಲ್ಲದೆ ನೇಪಾಳಕ್ಕೆ ಪ್ರಯಾಣಿಸಬಹುದಾಗಿದೆ. ಸಾಮಾನ್ಯವಾಗಿ ವಿವಿಧ ಗಡಿ ಚೆಕ್ಪೋಸ್ಟ್ಗಳಲ್ಲಿ ಪ್ರವೇಶವನ್ನು ಇಲ್ಲಿ ನೀಡಲಾಗುತ್ತದೆ.
ಮೂವತ್ತು ದಿನಗಳ ಕಾಲ ಭಾರತೀಯರು ವೀಸಾ ಇಲ್ಲದೆಯೇ ಜಮೈಕಾದಲ್ಲಿ ವಾಸವಿರಲು ಅವಕಾಶವಿದೆ. ನೀವು ಜಮೈಕಾಗೆ ಭೇಟಿ ನೀಡಿದರೆ ಅಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ನಿಮ್ಮ ಪಾಸ್ಪೋರ್ಟ್ ಸ್ಟ್ಯಾಂಪ್ ಮಾಡಿಸುತ್ತಾರೆ. ಇದು ನಿಮಗೆ ಅಧಿಕೃತ ಪ್ರವಾಸಿ ವೀಸಾವಾಗಿ ಜಮೈಕಾದಲ್ಲಿ ಕಾರ್ಯ ನಿರ್ವಹಿಸುತ್ತದೆ.
ಇನ್ನು ವೀಸಾ ಇಲ್ಲದೆಯೇ ಭಾರತೀಯರು ಫಿಜಿ ದ್ವೀಪಕ್ಕೆ ಪ್ರಯಾಣ ಬೆಳೆಸಬಹುದು. ಇಲ್ಲಿ 12 ದಿನಗಳ ಕಾಲ ಭಾರತೀಯರು ವೀಸಾ ಇಲ್ಲದೆಯೇ ವಾಸಿಸಬಹುದಾಗಿದೆ.
2024ರ ಮೇ ತಿಂಗಳವರೆಗೆ ಪ್ರವಾಸದ ಉದ್ದೇಶಕ್ಕಾಗಿ ಅಥವಾ ವ್ಯಾಪಾರದ ದೃಷ್ಟಿಯಿಂದ ಥೈಲ್ಯಾಂಡ್ಗೆ ಭೇಟಿ ನೀಡುವ ಭಾರತೀಯರು ವೀಸಾ ಪಡೆಯುವ ಅಗತ್ಯ ಇರೋದಿಲ್ಲ.
ಭೂತಾನ್‌ಗೆ ಭೇಟಿ ನೀಡಲು ಭಾರತೀಯ ನಾಗರಿಕರಿಗೆ ವೀಸಾ ಅಗತ್ಯವಿಲ್ಲ. ಆದರೆ, ಗಡಿಯಲ್ಲಿ ಪ್ರವೇಶ ಪರವಾನಗಿಯನ್ನು ಪಡೆಯಬೇಕು.

