ಕಾರವಾರ: ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಕ್ರಿಕೆಟ್ ಪಂದ್ಯ ರದ್ದುಪಡಿಸಲಾಗಿದೆ. ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಭಟ್ಕಳ ಕ್ರಿಕೆಟ್ ಲೀಗ್ ರದ್ದುಪಡಿಸಿದೆ.
ಯುದ್ಧ ಮುಗಿಯುವವರೆಗೆ ಮದುವೆ, ಮನರಂಜನೆ ಖರ್ಚಿಗೆ ಮಿತಿ ಇರಲಿ. ಹಣ ಉಳಿಸಿ ಪ್ಯಾಲೇಸ್ತೀನ್ ಗೆ ನೆರವಾಗುವಂತೆ ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮುಸ್ಲಿಮರಿಗೆ ಯೂತ್ ಫೆಡರೇಷನ್ ಕರೆ ನೀಡಿದೆ.
ನವೆಂಬರ್ 3 ರಿಂದ ಒಂದು ತಿಂಗಳ ಕಾಲ ಭಟ್ಕಳ ಕ್ರಿಕೆಟ್ ಲೀಗ್ -5 ಆಯೋಜಿಸಲಾಗಿತ್ತು. ಕಳೆದ ತಿಂಗಳು 200 ಆಟಗಾರರನ್ನು ಗುರುತಿಸಿ 12 ತಂಡ ಆಯ್ಕೆ ಮಾಡಲಾಗಿತ್ತು.
ಪ್ಯಾಲೇಸ್ತೀನ್ ನಲ್ಲಿ ಮುಸ್ಲಿಮರ ಹತ್ಯೆ ಖಂಡಿಸಿ ಕ್ರಿಕೆಟ್ ಲೀಗ್ ರದ್ದುಪಡಿಸಲಾಗಿದೆ. ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಭಟ್ಕಳ ಮುಸ್ಲಿಂ ಯೂತ್ ಫೆಡರೇಷನ್ ಕ್ರಿಕೆಟ್ ಪಂದ್ಯ ರದ್ದುಪಡಿಸಿದೆ.