
ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದು ಅತ್ಯಂತ ದೀರ್ಘಕಾಲದ ಕೆಲಸವಾಗಿದೆ. ಸಾಕಷ್ಟು ಪೇಪರ್ ವರ್ಕ್ ಇರೋದ್ರಿಂದ ಈ ಕೆಲಸ ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ. ಆದರೆ ಮುಂದಿನ ಎರಡು ತಿಂಗಳುಗಳಲ್ಲಿ ಇವೆಲ್ಲ ಬದಲಾಗುವ ಸಣ್ಣ ನಿರೀಕ್ಷೆಯೊಂದು ಹುಟ್ಟಿಕೊಂಡಿದೆ. ಈ ವರ್ಷದ ಅಂತ್ಯದ ಒಳಗಾಗಿ ದೇಶದಲ್ಲಿ ಆರೋಗ್ಯ ವಿಮಾ ಹಕ್ಕುಗಳ ವಿನಿಮಯ ವ್ಯವಸ್ಥೆ ಬರಲಿದೆ.
ಮುಂದಿನ 2 ತಿಂಗಳಲ್ಲಿ ನಾವು ವಿಮೆ ಕ್ಲೇಮ್ ವಿನಿಮಯವನ್ನು ಹೊಂದಲು ಸಾಧ್ಯವಾಗಬಹುದು ಎಂದು ಭಾವಿಸಿದ್ದೇವೆ ಎಂದು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ನಿರ್ದೇಶಕ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹೆಚ್ಚುವರಿ ಸಿಇಓ ಡಾ. ವಸಂತ್ ಗಾರ್ಗ್ ಹೇಳಿದ್ದಾರೆ.
ಅಧಿಕೃತ ಭಾಷೆಯಲ್ಲಿ ಇದನ್ನು ನ್ಯಾಷನಲ್ ಹೆಲ್ತ್ ಕ್ಲೇಮ್ ಎಕ್ಸ್ಚೇಂಜ್ ಅಥವಾ ಎನ್ಹೆಚ್ಸಿಎಕ್ಸ್ ಎಂದು ಕರೆಯಲಾಗುತ್ತದೆ. ಇದು ನಿಮಗೆ ಡಿಜಿಟಲ್ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳನ್ನು ಒದಗಿಸುತ್ತದೆ. ಇದು ಆರೋಗ್ಯ ವಿಮೆಗಳನ್ನು ಕ್ಲೇಮ್ ಮಾಡಲು ತಡೆರಹಿತ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡಲಿದೆ.
ಅಕ್ಟೋಬರ್ 25 ಹಾಗೂ 27ರ ನಡುವೆ ಮಹತ್ವದ ಹೆಜ್ಜೆಯನ್ನಿರಿಸಿದ ಎನ್ಹೆಚ್ಸಿಎಕ್ಸ್ ಪ್ರಸ್ತುತ ಸ್ಯಾಂಡ್ಬಾಕ್ಸ್ ಹಂತದಲ್ಲಿದೆ. ವಿಮಾ ಕಂಪನಿಗಳು ಹಾಗೂ ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ಗಳು ಎನ್ಹೆಚ್ಸಿಎಕ್ಸ್ ಮೂಲಕ ವಿದ್ಯುನ್ಮಾನವಾಗಿಯೆ ಕ್ಲೈಮ್ಗಳನ್ನು ಸ್ವೀಕರಿಸಬಹುದು. ಇದು ಸ್ಥಳದಲ್ಲಿಯೇ ಪ್ರಮಾಣೀಕರಣವನ್ನು ಪಡೆಯಲು ಹಾಗೂ ಮುಂದಿನ ಹಂತಗಳನ್ನು ಪಾಲಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಬೇಗ ಬೇಗನೆ ನಿಮ್ಮ ವಿಮೆಯನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.