ಬಾದಾಮಿ, ಪಿಸ್ತಾದಂತೆ ಅಂಜೂರವನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ಬಹಳ ಕಡಿಮೆ. ಆದ್ರೆ ಅಂಜೂರದಲ್ಲೂ ಅಪಾರ ಶಕ್ತಿಯಿದೆ. ನಿಯಮಿತವಾಗಿ ಅಂಜೂರ ಸೇವನೆ ಮಾಡುವುದ್ರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಸಿಗುತ್ತದೆ.
ಅಂಜೂರ ಸೇವನೆಯಿಂದಾಗುವ ಲಾಭ :
- ಅಂಜೂರ ನಮ್ಮ ದೇಹಕ್ಕೆ ಶಕ್ತಿ ನೀಡುವ ಕೆಲಸವನ್ನು ಮಾಡುತ್ತದೆ. ನಮ್ಮ ಸುಸ್ತು, ಆಯಾಸವನ್ನು ಕಡಿಮೆ ಮಾಡುತ್ತದೆ.
- ನೀವು ಹಾಲಿನಲ್ಲಿ ಅಂಜೂರವನ್ನು ನೆನೆಹಾಕಿ ಸೇವನೆ ಮಾಡಿದ್ರೆ ನರ ದೌರ್ಬಲ್ಯ ಸಮಸ್ಯೆ ಕಡಿಮೆಯಾಗುತ್ತದೆ.
- ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನೂ ಅಂಜೂರ ಮಾಡುತ್ತದೆ. ಹಾಲಿನೊಂದಿಗೆ ಅಂಜೂರವನ್ನು ನೆನೆಹಾಕಿ ಅಥವಾ ಹಾಲಿನ ಜೊತೆ ಸೇವನೆ ಮಾಡುವುದು ಹೆಚ್ಚು ಪ್ರಯೋಜನಕಾರಿ.
- ರಕ್ತದೊತ್ತಡ ಸಮಸ್ಯೆಯುನ್ನು ನಿಯಂತ್ರಿಸಲು ನೀವು ಡಯಟ್ ನಲ್ಲಿ ಅಂಜೂರ ಸೇರಿಸಿ.
- ಮಾನಸಿಕ ಸಮಸ್ಯೆ, ಉದ್ವೇಗ ನಿಯಂತ್ರಣಕ್ಕೂ ಅಂಜೂರ ಒಳ್ಳೆಯದು.
- ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ದಿನಕ್ಕೊಂದಾದ್ರೂ ಅಂಜೂರವನ್ನು ಸೇವನೆ ಮಾಡಲು ಮರೆಯಬೇಡಿ.
- ಅಂಜೂರದಲ್ಲಿ ಕೊಬ್ಬಿರದ ಕಾರಣ ನಿಮಗೆ ತೂಕ ಏರಿಕೆ ಚಿಂತೆಯಿಲ್ಲ. ತೂಕ ನಿಯಂತ್ರಣಕ್ಕೆ ನೀವು ಅಂಜೂರವನ್ನು ಸೇವನೆ ಮಾಡಬಹುದು.
ದಿನದಲ್ಲಿ ಎಷ್ಟು ಅಂಜೂರ ಸೇವನೆ ಮಾಡಬೇಕು? :
ದಿನದಲ್ಲಿ ನೀವು 2 ರಿಂದ 3 ಅಂಜೂರದ ಹಣ್ಣುಗಳನ್ನು ಸೇವನೆ ಮಾಡಬೇಕು. ಅದನ್ನು ಹಾಗೆ ತಿನ್ನುವುದಕ್ಕಿಂತ ತುಂಡುಗಳಾಗಿ ಕತ್ತರಿಸಿ ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿ. ಬೆಳಿಗ್ಗೆ ಆ ನೀರನ್ನು ಕುದಿಸಿ ನೀರನ್ನು ಅರ್ಧಕ್ಕೆ ಇಳಿಸಿ ಕುಡಿಯಿರಿ. ಉಳಿದ ಅಂಜೂರದ ಹಣ್ಣುಗಳನ್ನು ಜಗಿದು ತಿನ್ನಿರಿ. ನೀವು ಹಾಲಿನಲ್ಲಿ ನೆನೆಹಾಕಿ ಅಂಜೂರ ಸೇವನೆ ಮಾಡೋದ್ರಿಂದಲೂ ಲಾಭವಿದೆ.