ವಿಪರೀತ ಖಾರ ತಿನ್ನುವ ಅಭ್ಯಾಸವಿದೆಯೇ……? ಹಾಗಾದ್ರೆ ಈ ಸಮಸ್ಯೆ ಎದುರಿಸಲು ಸಿದ್ಧರಾಗಿ….!

ಮಸಾಲೆಗಳು ಭಾರತೀಯರ ಆಹಾರದ ಪ್ರಮುಖ ಭಾಗ. ಹಸಿ ಮೆಣಸಿನಕಾಯಿ ಮತ್ತು ಕೆಂಪು ಮೆಣಸಿನಕಾಯಿ ಅಡುಗೆಗೆ ಇರಲೇಬೇಕು. ಸಾಮಾನ್ಯವಾಗಿ ಬಹುತೇಕ ಎಲ್ಲಾ ರೆಸಿಪಿಗಳಿಗೂ ಮೆಣಸಿನಕಾಯಿಯ ಒಗ್ಗರಣೆ ಕೊಡುತ್ತೇವೆ.

ಅಡುಗೆಗೆ ಕೆಂಪು ಮೆಣಸಿನ ಪುಡಿಯನ್ನು ಕೂಡ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಈ ಮಸಾಲೆ ಪದಾರ್ಥವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಬಳಸಬೇಕು. ಮೆಣಸಿನ ಪುಡಿ ಅಥವಾ ಖಾರವನ್ನು ಅತಿಯಾಗಿ ಸೇವಿಸಿದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ವಿಪರೀತ ಖಾರವನ್ನು ಏಕೆ ತಿನ್ನಬಾರದು?

ಜೀರ್ಣಕ್ರಿಯೆಗೆ ತೊಂದರೆ – ತುಂಬಾ ಖಾರದ ತಿನಿಸುಗಳನ್ನು ಸೇವನೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟಾಗಬಹುದು. ಇದು ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆಯ ಸಮಸ್ಯೆಗೆ ಕಾರಣವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿ ಕಾರ್ಯನಿರ್ವಹಿಸಬೇಕೆಂದರೆ ಮಸಾಲೆ ಪದಾರ್ಥವನ್ನು ಖಾರವನ್ನು ಮಿತವಾಗಿ ಸೇವಿಸಿ.

ಮಾನಸಿಕ ಸಮಸ್ಯೆಗಳುಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಹೆಚ್ಚು ಒತ್ತಡ, ಆತಂಕ ಮತ್ತು ಚಡಪಡಿಕೆಗೆ ಕಾರಣವಾಗಬಹುದು.

ಅಧಿಕ ರಕ್ತದೊತ್ತಡಮಸಾಲೆಯುಕ್ತ ಆಹಾರವು ಹೆಚ್ಚು ಉಪ್ಪಿನಂಶವನ್ನು ಹೊಂದಿರುತ್ತದೆ. ಇದರಿಂದಾಗಿ ರಕ್ತದೊತ್ತಡ  ಹೆಚ್ಚಾಗುತ್ತದೆ. ಹೈ ಬಿಪಿ ಸಮಸ್ಯೆ ಇದ್ದರೆ ಮೆಣಸಿನಕಾಯಿ ಮತ್ತು ಮಸಾಲೆಗಳ ಸೇವನೆಯನ್ನು ಕಡಿಮೆ ಮಾಡಿ. ಇಲ್ಲದಿದ್ದರೆ ದೀರ್ಘಾವಧಿಯಲ್ಲಿ ಇದು ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು.

ಒಣ ಚರ್ಮಮಸಾಲೆಯುಕ್ತ ಆಹಾರದ ಅತಿಯಾದ ಸೇವನೆಯು ಚರ್ಮದ ತೇವಾಂಶವನ್ನು ಕಡಿಮೆ ಮಾಡುತ್ತದೆ. ಶುಷ್ಕತೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ತೂಕ ಹೆಚ್ಚಾಗುವುದುಕಟುವಾದ ಮತ್ತು ಮಸಾಲೆಯುಕ್ತ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಇದಕ್ಕೆ ಕಾರಣವೆಂದರೆ ಇದು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಇದನ್ನು ತಿಂದ ನಂತರ ನಿಮಗೆ ಹೆಚ್ಚು ಹಸಿವನ್ನು ಉಂಟುಮಾಡಬಹುದು.

ಪೈಲ್ಸ್ಅತಿಯಾದ ಖಾರ, ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ಸೇವಿಸುವವರಿಗೆ ಹೆಚ್ಚಾಗಿ ಪೈಲ್ಸ್ ಬರುವುದನ್ನು ನೀವು ಗಮನಿಸಿರಬೇಕು. ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದರೆ ಈ ಸಮಸ್ಯೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read