BREAKING : ನ.9 ರಂದು ರಾಜ್ಯ ಸರ್ಕಾರದ ಮಹತ್ವದ ‘ಸಚಿವ ಸಂಪುಟ ಸಭೆ’ ನಿಗದಿ

ಬೆಂಗಳೂರು : ನವೆಂಬರ್ 9ರಂದು ರಾಜ್ಯ ಸರ್ಕಾರದ ಮಹತ್ವದ ಸಚಿವ ಸಂಪುಟ ಸಭೆ ( cabinet Meeting ) ನಿಗದಿಯಾಗಿದೆ.

ನವೆಂಬರ್ 9ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಸಭೆ ನಡೆಯಲಿದೆ.

ಡಿಸೆಂಬರ್ 4 ರಿಂದ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದ್ದು,ಈ ಕುರಿತು ಸಚಿವ ಸಂಪುಟದಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆ, ಆಪರೇಷನ್ ಹಸ್ತ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದ್ದು, ವಿವಿಧ ಇಲಾಖೆಗಳಿಗೆ ಅನುದಾನ ಘೋಷಣೆ ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಮಂತ್ರಿಮಂಡಲದ ಸಚಿವರು, ಶಾಸಕರು, ಅಧಿಕಾರಿಗಳು ಹಾಜರಿರಲಿದ್ದಾರೆ.

ರಾಜ್ಯಕ್ಕೆ “ಕರ್ನಾಟಕ”ದ ನಾಮಕರಣವಾಗಿ 50 ವರ್ಷ : ರಾಜ್ಯ ಸರ್ಕಾರದಿಂದ ಸಂಭ್ರಮಾಚರಣೆ

ರಾಜ್ಯಕ್ಕೆ “ಕರ್ನಾಟಕ”ದ ನಾಮಕರಣವಾಗಿ 50 ವರ್ಷ ಸಂದಿದೆ, 50ನೇ ವರ್ಷದ ಸಂಭ್ರಮದಲ್ಲಿದ್ದೇವೆ. ಆದರೆ, ಕೇಂದ್ರ ಸರ್ಕಾರಕ್ಕೆ ನಾಡಧ್ವಜದ ಮಾನ್ಯತೆಗಾಗಿ ಪ್ರಸ್ತಾವನೆ ಸಲ್ಲಿಸಿ 6 ವರ್ಷ ಕಳೆದರೂ ಕೇಂದ್ರ ಸರ್ಕಾರದ ಸಣ್ಣ ಸ್ಪಂದನೆಯೂ ಇಲ್ಲ. ದಿನಕ್ಕೆ 18 ಗಂಟೆ ಕೆಲಸ ಮಾಡುತ್ತೇನೆ ಎನ್ನುವ ಮೋದಿಯವರಿಗೆ ಇದಕ್ಕೆ ಸಮಯ ಸಿಗಲಿಲ್ಲವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸಂಸದರಿಗೆ ನಾಡು, ನುಡಿಯ ವಿಚಾರದಲ್ಲಿ ದನಿ ಎತ್ತುವ ಕನಿಷ್ಠ ಧೈರ್ಯವೂ ಇಲ್ಲ, ಕಾಳಜಿಯೂ ಇಲ್ಲ. ಕರ್ನಾಟಕದ ಅಸ್ಮಿತೆಯ ಬಗ್ಗೆ ಕೇಂದ್ರ ಸರ್ಕಾರ ದ್ವೇಷ ಹಾಗೂ ನಿರ್ಲಕ್ಷ್ಯದ ಭಾವನೆ ಹೊಂದಿದೆ. ಇದಕ್ಕೆ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ ಎಂದಿದೆ.

https://twitter.com/INCKarnataka/status/1718869749541798196

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read