alex Certify ಮೊಬೈಲ್ ಮೂಲಕವೇ ಖರೀದಿಸಬಹುದು ರೈಲಿನ ಜನರಲ್ ಟಿಕೆಟ್…! ಇಲ್ಲಿದೆ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಮೂಲಕವೇ ಖರೀದಿಸಬಹುದು ರೈಲಿನ ಜನರಲ್ ಟಿಕೆಟ್…! ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್. ಇನ್ಮುಂದೆ ರೈಲ್ವೆ ಪ್ರಯಾಣದ ಜನರಲ್ ಟಿಕೆಟ್ ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಟಿಕೆಟ್ ಖರೀದಿಗಾಗಿ ರೈಲ್ವೆ ಇಲಾಖೆ ಹೊಸ ಆಪ್ ಪರಿಚಯಿಸಿದೆ.

ಹೌದು. ಜನರಲ್ ಬೋಗಿ ಟಿಕೆಟ್ ಗಾಗಿ ಇನ್ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲಬೇಕಿಲ್ಲ. ಚಿಲ್ಲರೆಗಾಗಿ ತಡಕಾಡಬೇಕಿಲ್ಲ. ರೈಲ್ವೆ ಇಲಾಖೆ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದು, ಕುಳಿತ ಜಾಗದಲ್ಲಿಯೇ ಮೊಬೈಲ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

ಜನರಲ್ ಬೋಗಿಯ ಟಿಕೆಟ್ ಗಳನ್ನು ಮೊಬೈಲ್ ಆಪ್ ಮೂಲಕ ಖರೀದಿಸಬಹುದು. ರೈಲ್ವೆ ಇಲಾಖೆ ವತಿಯಿಂದ UTS MOBILE APP (UNRESERVED TICKETS APP) ಬಿಡುಗಡೆ ಮಾಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಆಪ್ ಲಭ್ಯವಿದೆ. ಇದನ್ನು ಡೌನ್ ಲೋಡ್ ಮಾಡಿಕೊಂಡು ರಿಜಿಸ್ಟರ್ ಮಾಡಿಕೊಳ್ಳಬೇಕು. ಬಳಿಕ ಟಿಕೆಟ್ ಬುಕ್ ಮಾಡುವ ಮೊದಲು PAPER LESS ಅಥವಾ PAPER ಎಂಬ ಎರಡು ಆಪ್ಶನ್ ಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಬಳಿಕ ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ಎಂಬುದನ್ನು ನಮೂದಿಸಬೇಕು.

ಟಿಕೆಟ್ ಶುಲ್ಕ ಪಾವತಿಗೆ R-WALLET ಆಯ್ಕೆ ಕೂಡ ಇದೆ. ಮೊದಲೇ ವಾಲೆಟ್ ನಲ್ಲಿ ಹಣವಿದ್ದರೆ ಟಿಕೆಟ್ ಖರೀದಿಸಬಹುದು. ಇಲ್ಲವಾದಲ್ಲಿ UPI,ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕವೂ ಟಿಕೆಟ್ ಖರಿದಿಸಬಹುದಾಗಿದೆ. ಇನ್ನು ಆಪ್ ನಲ್ಲಿ ಶೋ ಟಿಕೆಟ್ ಕ್ಲಿಕ್ ಮಾಡಿದರೆ ಪೆಪರ್ ಲೆಸ್ ಟಿಕೆಟ್ ನ್ನು ರೈಲ್ವೆ ಟಿಟಿಗೆ ತೋರಿಸಬಹುದು. ಪೇಪರ್ ಟಿಕೆಟ್ ಅಗತ್ಯವಿದ್ದರೆ ಬುಕ್ಕಿಂಗ್ ಅವಧಿಯಲ್ಲಿ ಒದಗಿಸಿದ ಐಡಿ ಬಳಸಿ ಬುಕ್ಕಿಂಗ್ ಕೌಂಟರ್ ನಲ್ಲಿ ಟಿಕೆಟ್ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...