ಭಾರತೀಯ ದ್ವಿಚಕ್ರ ವಾಹನ ತಯಾರಿಕೆಯ ಅತ್ಯಂತ ಪ್ರಸಿದ್ಧ ಕಂಪನಿ ಎಂದರೆ ರಾಯಲ್ ಎನ್ಫೀಲ್ಡ್. ಇದೀಗ ರಾಯಲ್ ಎನ್ಫೀಲ್ಡ್ ತನ್ನ ಹೊಸ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಮುಂದಿನ ತಿಂಗಳು ರಾಯಲ್ ಎನ್ಫೀಲ್ಡ್ ಹಿಮಾಲಯನ್ 452 ರಿಲೀಸ್ ಆಗಲಿದ್ದು ಇದರ ಮತ್ತೊಂದು ವಿಡಿಯೋವನ್ನು ರಾಯಲ್ ಎನ್ಫೀಲ್ಡ್ ಕಂಪನಿಯು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಸಖತ್ ಹವಾ ಸೃಷ್ಟಿಸಿದೆ.
ನವೆಂಬರ್ 7ರಂದು ಲಾಂಚ್ ಆಗಲಿರುವ ಐಕಾನಿಕ್ ಹಿಮಾಲಯನ್ 452 ಬೈಕ್ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಹೊಸ ಮಾದರಿಯ ಹಿಮಾಲಯನ್ 452 2016 ರಲ್ಲಿ ಬಿಡುಗಡೆಯಾದ ಹಿಮಾಲಯನ್ 411ಗೆ ಉತ್ತರಾಧಿಕಾರಿಯಾಗಿದೆ. ಹೊಸ ಮಾದರಿಯ ಹಿಮಾಲಯನ್ ಬೈಕ್ 65cc ಲಿಕ್ವಿಡ್-ಕೂಲ್ಡ್ ಎಂಜಿನ್‌ನಂತಹ ಅನೇಕ ಬದಲಾವಣೆಗಳೊಂದಿಗೆ ಬರುತ್ತದೆ. ಹಳೆ ಮಾದರಿಯ ಹಿಮಾಲಯನ್ಗಿಂತ ಈ ಬೈಕ್ ಹೆಚ್ಚಿನ 15ಪಿಎಸ್ ಹೊಂದಿದೆ. ಹಿಮಾಲಯನ್ 452 196 ಕೆಜಿ ಹೊಂದಿದೆ. ಹಳೆ ಮಾದರಿಯ ಹಿಮಾಲಯನ್ಗಿಂತ 3 ಕೆಜಿ ಕಮ್ಮಿ ತೂಗುತ್ತದೆ.
ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಹಿಮಾಲಯನ್ 452 ಬೈಕ್ನ ಅಂದಾಜು ಬೆಲೆ 2.8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬೈಕ್ KTM 390 ಅಡ್ವೆಂಚರ್ ಮತ್ತು ಮುಂಬರುವ Hero XPulse 400ಗೆ ಠಕ್ಕರ್ ನೀಡಲಿದೆ ಎಂದು ಅಂದಾಜಿಸಲಾಗಿದೆ.