ಸಡಗರ – ಸಂಭ್ರಮದಿಂದ ʼಭೂಮಿ ಹುಣ್ಣಿಮೆʼ ಆಚರಣೆ

ರೈತರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಭೂಮಿ ಹುಣ್ಣಿಮೆಯನ್ನು ಇಂದು ರೈತರು ತಮ್ಮ ತಮ್ಮ ಹೊಲಗಳಲ್ಲಿ ಸಂತಸ ಸಂಭ್ರಮಗಳಿಂದ ಆಚರಿಸಿದರು.

ಇದೊಂದು ವಿಶಿಷ್ಟ ಸಂಪ್ರದಾಯದ ಹಬ್ಬವಾಗಿದ್ದು, ಭೂಮಿ ತಾಯಿಯೇ ರೈತಾಪಿ ಜನಗಳ ಜೀವನಾಡಿಯಾಗಿದೆ. ಭೂಮಿ ಹುಣ್ಣಿಮೆ ದಿನ ಭೂತಾಯಿಗೆ ಸೀಮಂತ ಮಾಡುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ. ತಮ್ಮ ತಮ್ಮ ಹೊಲಗಳಲ್ಲಿ ಭತ್ತದ ಬೆಳೆಗೋ, ಅಡಿಕೆ ಮರಕ್ಕೋ ಸೀರೆ ಉಡಿಸಿ ಉಡಿ ತುಂಬುವುದು ವಾಡಿಕೆಯಾಗಿದೆ. ಜೊತೆಗೆ ಬುತ್ತಿ, ಚಿತ್ರಾನ್ನ, ಕಡುಬು, ಕಜ್ಜಾಯ ಮಾಡಿ ಭೂದೇವಿಗೆ ಅರ್ಪಿಸಿ ಸಂಭ್ರಮಿಸುತ್ತಾರೆ.

ಬಯಲುಸೀಮೆ ಮತ್ತು ಮಲೆನಾಡು ಎರಡೂ ಭಾಗಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ರೈತರು ಭೂಮಿ ಹುಣ್ಣಿಮೆ ಆಚರಿಸುತ್ತಾರೆ. ಭೂಮಣ್ಣು ಬುಟ್ಟಿ ತಯಾರಿಸಿ ಅದಕ್ಕೆ ಕೆಮ್ಮಣ್ಣು ಮತ್ತು ಶೇಡಿಯ ಚಿತ್ತಾರ ಬಿಡಿಸಿ ಬುಟ್ಟಿಯಲ್ಲಿ ಪೂಜಾ ಸಾಮಗ್ರಿ ತುಂಬಿಕೊಂಡು ತಮ್ಮ ಹೊಲಗಳಿಗೆ ಹೋಗಿ ವಿಶೇಷವಾಗಿ ಪೂಜೆ ಮಾಡುತ್ತಾರೆ. ನಂತರ ಚರಗವನ್ನು ತಮ್ಮ ಹೊಲದ ಸುತ್ತ ಬೀರುತ್ತಾರೆ.

ಮನೆಯವರೆಲ್ಲರೂ ಸಂತಸ ಸಂಭ್ರಮಗಳಿಂದ ಒಟ್ಟಾಗಿ ತೋಟದಲ್ಲೆ ಊಟ ಮಾಡುವ ದೃಶ್ಯ ಕೂಡ ಸುಂದರವಾಗಿರುತ್ತದೆ. ಒಟ್ಟಾರೆ ಭೂಮಿಯನ್ನೆ ನಂಬಿರುವ ನಮ್ಮ ರೈತರು ಇದನ್ನು ಆರಾಧನೆಯಂತೆ ಮಾಡುತ್ತಾರೆ. ನೀರಾವರಿ ಪ್ರದೇಶದಲ್ಲಿ ರೈತರು ಒಂದಿಷ್ಟು ಸಮಾಧಾನವಾಗಿದ್ದರೆ ಬಯಲುಸೀಮೆಯಲ್ಲಿ ಮಾತ್ರ ರೈತರ ಗೋಳು ತಪ್ಪಿಲ್ಲ. ಬರಗಾಲ ಕಾಲಿಟ್ಟಿದ್ದು ಬೆಳೆಯೆಲ್ಲಾ ನಾಶವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read