ಬೇಸಿಗೆಯಲ್ಲಿ ಬಾಯಾರಿಕೆ ಜಾಸ್ತಿ. ಕುಡಿಯೋಕೆ ಏನಾದ್ರೂ ತಣ್ಣಗೆ ಬೇಕು ಎನಿಸುತ್ತೆ. ಹಾಗಂತ ಅಂಗಡಿಗೆ ಹೋಗಿ ಕೂಲ್ ಡ್ರಿಂಕ್ಸ್ ಕುಡಿಯೋ ಹವ್ಯಾಸ ಬೆಳೆಸಿಕೊಳ್ಬೇಡಿ. ಮನೆಯಲ್ಲೇ ಟೇಸ್ಟಿ ಆಗಿರೋ ತಂಪಾದ ಪಾನೀಯವನ್ನು ನೀವೇ ತಯಾರಿಸಬಹುದು.
ಬೇಕಾಗುವ ಸಾಮಗ್ರಿ : 3-4 ಕಿತ್ತಳೆ ಹಣ್ಣು, 4 ಚಮಚ ಸಕ್ಕರೆ, ತುರಿದಿಟ್ಟ 1 ಕ್ಯಾರೆಟ್, 100 ಮಿಲಿ ನಿಂಬೆ ಪಾನಕ, 1 ಕಪ್ ಸೋಡಾ ವಾಟರ್.
ಮಾಡುವ ವಿಧಾನ : ಕಿತ್ತಳೆ ಜ್ಯೂಸನ್ನು ಪೂರ್ತಿಯಾಗಿ ಹಿಂಡಿಕೊಂಡು, ಸೋಸಿ. 7-8 ನಿಮಿಷ ಅದನ್ನು ಕುದಿಸಿ. ಅದು ತಣ್ಣಗಾದ ಮೇಲೆ ತುರಿದ ಕ್ಯಾರೆಟ್ ಮತ್ತು ಸಕ್ಕರೆ ಹಾಕಿ ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ. ಅದನ್ನು ಸೋಸಿಕೊಂಡು ಅದನ್ನು ಗ್ಲಾಸಿನಲ್ಲಿ ಹಾಕಿ. ಅದಕ್ಕೆ ನಿಂಬೆ ಪಾನಕ ಮತ್ತು ಸೋಡಾ ವಾಟರ್ ಬೆರೆಸಿದರೆ ತಂಪಾದ ಆರೇಂಜ್ ಸೋಡಾ ರೆಡಿಯಾಗುತ್ತದೆ.