alex Certify ವಸತಿ ರಹಿತರಿಗೆ ಗುಡ್ ನ್ಯೂಸ್ : ಜನಸಾಮಾನ್ಯರಿಗೆ ನಿವೇಶನ ನೀಡಲು ಸಚಿವ ಭೈರತಿ ಸುರೇಶ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಸತಿ ರಹಿತರಿಗೆ ಗುಡ್ ನ್ಯೂಸ್ : ಜನಸಾಮಾನ್ಯರಿಗೆ ನಿವೇಶನ ನೀಡಲು ಸಚಿವ ಭೈರತಿ ಸುರೇಶ್ ಸೂಚನೆ

ಶಿವಮೊಗ್ಗ : ಬಡವರು, ಮಧ್ಯಮವರ್ಗದವರಿಗೆ ಸೂಡಾದಿಂದ ಸರ್ಕಾರಿ ಲೇಔಟ್‍ಗಳನ್ನು ಸಿದ್ದಪಡಿಸಿ ನೀಡಬೇಕೆಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರಾದ ಬಿ ಎಸ್ ಸುರೇಶ ಸೂಡಾ ಆಯುಕ್ತರಿಗೆ ತಿಳಿಸಿದರು.

ನಗರಾಭಿವೃದಿ ಪ್ರಾಧಿಕಾರ, ಮಹಾನಗರಪಾಲಿಕೆ, ಕೆಯುಐಡಿಎಫ್‍ಸಿ, ಕನನೀಸ&ಒಚ ಮತ್ತು ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಜಿಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.

ಜನಸಾಮಾನ್ಯರಿಗೆ ಅವರ ಕೈಗೆಟುಕುವ ದರದಲ್ಲಿ ನಿವೇಶನ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕೇವಲ ಖಾಸಗಿಯವರಿಗೆ ಅನುಮತಿ ನೀಡುವುದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಕೆಲಸವಲ್ಲ. ಶೀಘ್ರದಲ್ಲಿ ನಗರದಲ್ಲಿ ಸ್ಥಳ ಹುಡುಕಿ 250 ರಿಂದ 500 ಎಕರೆಯ ಸರ್ಕಾರಿ ಲೇಔಟ್ ಸಿದ್ದಪಡಿಸಿ ಸಾರ್ವಜನಿಕರಿಗೆ ನೀಡಬೇಕು. ಅಲ್ಲಿಯವರೆಗೆ ಖಾಸಗಿಯವರಿಗೆ ಅನುಮತಿ ನೀಡುವ ಹಾಗಿಲ್ಲ ಎಂದು ತಾಕೀತು ಮಾಡಿದರು.

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಸರ್ಕಾರಿ ಲೇಔಟ್ ತುಂಬಾ ಕಡಿಮೆ ಇದೆ. ಸ್ಥಳೀಯ ಶಾಸಕರು, ಸಂಸದರು ಮತ್ತು ಡಿಸಿ ಯವರೊಂದಿಗೆ ಸೂಡಾ ಆಯುಕ್ತರು ಚರ್ಚಿಸಿ ಸ್ಥಳ ಗುರುತಿಸಿ ಲೇಔಟ್ ಅಭಿವೃದ್ದಿಪಡಿಸಬೇಕು ಹಾಗೂ ಸಿಡಿಪಿ ಯನ್ನು ಶೀಘ್ರದಲ್ಲಿ ಸಿದ್ದಪಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದರು.

ಪ್ರಾಧಿಕಾರದಿಂದ ಸರ್ಕಾರಿ ಲೇಔಟ್‍ಗಳು, ರಸ್ತೆಗಳು, ಕೆರೆ ಅಭಿವೃದ್ದಿ ಸೇರಿದಂತೆ ಅಭಿವೃದ್ದಿ ಕೆಲಸಗಳು ಆಗಬೇಕು. ಡಿಪಿಆರ್ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಎಲ್ಲ ಕೆಲಸಗಳು ಪಾರದರ್ಶಕವಾಗಿ ನಡೆಯಬೇಕು ಎಂದರು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...