HomeKarnatakaBIG NEWS: ಕಂಟ್ರಿ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಫೋಟೋ ಶೂಟ್; ಯುವಕನ ವಿರುದ್ಧ...

BIG NEWS: ಕಂಟ್ರಿ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಫೋಟೋ ಶೂಟ್; ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರಿಂದ ಪೊಲೀಸರಿಗೆ ಒತ್ತಾಯ

ಬಾಗಲಕೋಟೆ: ಯುವಕನೊಬ್ಬ ಕಂಟ್ರಿ ಪಿಸ್ತೂಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಫೋಟೋ ಶೂಟ್ ಮಾಡಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ತೇರದಾಳದಲ್ಲಿ ನಡೆದಿದೆ.

ಮೋಹನ್ ಗದಡಿ ಪಿಸ್ತೂಲಿನಿಂದ ಗುಂಡು ಹಾರಿಸಿದ ಯುವಕ. ಈತ ಷಣ್ಮುಖ ಗದಡಿ ಎಂಬುವವರ ಮಗನಾಗಿದ್ದು, ಯುವಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೋಹನ್ ಗದಡಿ, ತನ್ನ ಮನೆಯ ಟೆರೇಸ್ ಮೇಲಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ವಿಡಿಯೋ ಶೂಟ್ ಮಾಡಿಸಿದ್ದಾನೆ. ಈತನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಯುವಕನ ಕೈಗೆ ಕಂಟ್ರಿ ಪಿಸ್ತೂಲ್ ಹೇಗೆ ಬಂತು? ಎಂಬ ಪ್ರಶ್ನೆ ಮೂಡಿದೆ. ಷಣ್ಮುಗ ಗದಡಿ ಕಂಟ್ರಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular