ಬೆಂಗಳೂರು : ವಿದ್ಯುತ್ ಕೊರತೆಯಿಂದ ಆತಂಕಗೊಂಡಿದ್ದ ರೈತರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಶಿಂಷಾಪುರದ ವಿದ್ಯುತ್ ಘಟಕಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.
2022ರಲ್ಲಿ ಮಳೆ ಪ್ರವಾಹದಿಂದ ಹಾನಿಗೊಳಗಾಗಿ ಸ್ಥಗಿತಗೊಂಡಿದ್ದ ಶಿಂಷಾಪುರದ ವಿದ್ಯುತ್ ಘಟಕಗಳನ್ನು ಯಶಸ್ವಿಯಾಗಿ ದುರಸ್ತಿಪಡಿಸಲಾಗಿದೆ. ಪ್ರತಿ ಘಟಕವು ಒಂದು ನಿಮಿಷಕ್ಕೆ 8.6 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ. ಪ್ರಸ್ತುತ ಮೊದಲನೇ ಘಟಕದಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. 2ನೇ ಘಟಕಕ್ಕೂ ಅತಿಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಯೋಜನಾ ಮುಖ್ಯಸ್ಥ ಎನ್.ನವೀನ್ ಕುಮಾರ್ ಹೇಳಿದ್ದಾರೆ.