
ಹಮಾಸ್ ಭಯೋತ್ಪಾದಕರು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಕತ್ತರಿಸಿ ಆಕೆಯ ಹುಟ್ಟಲಿರುವ ಮಗುವಿನ ಶಿರಚ್ಛೇದ ಮಾಡಿದ್ದಾರೆ. IDF ಈ ಮಾಹಿತಿ ಹಂಚಿಕೊಂಡಿದ್ದು, X ಮಾರ್ಗಸೂಚಿಗಳ ಕಾರಣದಿಂದಾಗಿ ಫೋಟೋವನ್ನು ಹಂಚಿಕೊಳ್ಳುತ್ತಿಲ್ಲ ಎಂದು ಹೇಳಿದೆ.
ಹಮಾಸ್ ಹಠಾತ್ ದಾಳಿ ನಂತರ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಮುಗಿಬಿದ್ದಿದೆ. ಕಳೆದ 17 ದಿನಗಳಿಂದ ನಡೆಯುತ್ತಿರುವ ಯುದ್ಧದಿಂದ ಅಪಾರ ನಷ್ಟ ಉಂಟಾಗಿದೆ. ಒಂದೆಡೆ ಇಸ್ರೇಲ್ ಗಾಜಾ ಮೇಲಿನ ದಾಳಿಯನ್ನು ತೀವ್ರಗೊಳಿಸಿದ್ದರೆ ಮತ್ತೊಂದೆಡೆ ಹಮಾಸ್ ಕ್ರೂರ ಕೃತ್ಯವು ಅಮಾನವೀಯತೆಯ ಮಿತಿಯನ್ನು ಮೀರಿದೆ.
ದಾಳಿಯ ಸಮಯದಲ್ಲಿ, ಹಮಾಸ್ ಭಯೋತ್ಪಾದಕರು ಗರ್ಭಿಣಿ ಇಸ್ರೇಲಿ ಮಹಿಳೆಯನ್ನು ಸಹ ಬಿಡಲಿಲ್ಲ. ಭಯೋತ್ಪಾದಕರು ಗರ್ಭಿಣಿ ಮಹಿಳೆ ಮತ್ತು ಆಕೆಯ ಹೆಣ್ಣು ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಭಯೋತ್ಪಾದಕ ಉಗ್ರಗಾಮಿಗಳು ಗರ್ಭಿಣಿ ಇಸ್ರೇಲಿ ಮಹಿಳೆ ಮತ್ತು ಆಕೆಯ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿ ಮಾಡಿದೆ.
ಹಮಾಸ್ ಉಗ್ರಗಾಮಿಗಳು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಹರಿದು ಆಕೆಯ ಗರ್ಭದಲ್ಲಿರುವ ಮಗುವಿನ ಶಿರಚ್ಛೇದ ಮಾಡಿದ್ದಾರೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಎಕ್ಸ್ (ಟ್ವಿಟ್ಟರ್) ಮಾರ್ಗಸೂಚಿಗಳಿಂದಾಗಿ ಘಟನೆಯ ಫೋಟೋಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು IDF ಹೇಳಿದೆ.