ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ 2023 ರ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್ 1 ಫೈನಲ್ಸ್ ನಲ್ಲಿ ಭಾರತದ ಅವನಿ ಲೆಖರಾ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾಗೇಮ್ಸ್ 2022ರಲ್ಲಿ ಪ್ಯಾರಾ ಶೂಟಿಂಗ್ನಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಅವನಿಲೇಖರ ಪ್ಯಾರಾಲಿಂಪಿಕ್ಸ್ 2 10 ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ವಿಭಾಗದಲ್ಲಿ ಒಟ್ಟು 249.6 ಅಂಕಗಳನ್ನು ಗಳಿಸುವ ಮೂಲಕ ಅವನಿ ಏಷ್ಯನ್ ಪ್ಯಾರಾ ಗೇಮ್ಸ್ ದಾಖಲೆಯನ್ನು ನಿರ್ಮಿಸಿದ್ದಾರೆ.
ಭಾರತದ ನಿಶಾದ್ ಕುಮಾರ್ ಇಲ್ಲಿ ನಡೆಯುತ್ತಿರುವ 4ನೇ ಏಷ್ಯನ್ ಪ್ಯಾರಾ ಗೇಮ್ಸ್ 2022ರ ಪುರುಷರ ಹೈಜಂಪ್ ಟಿ 47 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಹೊಸ ಏಷ್ಯನ್ ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ.
ನಿಷಾದ್ ತನ್ನ ಇತರ ಸ್ಪರ್ಧಿಗಳಿಗಿಂತ ಎತ್ತರಕ್ಕೆ ಜಿಗಿದು 2.02 ಮೀಟರ್ ಜಿಗಿತದೊಂದಿಗೆ ಚಿನ್ನದ ಪದಕವನ್ನು ಪಡೆದರು. ಚೀನಾದ ಹಾಂಗ್ಜಿ ಚೆನ್ 1.94 ಮೀಟರ್ ದೂರ ಜಿಗಿದುಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಭಾರತದ ರಾಮ್ ಪಾಲ್ ಐದನೇ ಪ್ರಯತ್ನದಲ್ಲಿ 1.94 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು.
ಮತ್ತೊಂದಡೆ ಭಾರತದ ರಾಮ್ ಪಾಲ್ ಅವರು ಹೈಜಂಪಿಂಗ್ ನಲ್ಲಿ ಬೆಳ್ಳಿಪದಕ ಪಡೆದುಕೊಂಡಿದ್ದಾರೆ.