47 ನೇ ವಸಂತಕ್ಕೆ ಕಾಲಿಟ್ಟ ನಿರ್ದೇಶಕ ಪ್ರೇಮ್

Watch Ondu Cinema Kathe Season 1 Episode 62 : Prem Discusses Filming Ek Love Ya - Watch Full Episode Online(HD) On JioCinema

ಖ್ಯಾತ ನಿರ್ದೇಶಕ ಪ್ರೇಮ್ ಇಂದು 47 ನೇ ವಸಂತಕ್ಕೆ ಕಾಲಿಟ್ಟಿದ್ದು ಕುಟುಂಬದೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ.

2003ರಲ್ಲಿ ತೆರೆ ಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʼಕರಿಯʼ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ʼಕರಿಯʼ ಸಿನಿಮಾ ಸುಮಾರು ಎರಡು ವರ್ಷಗಳ ಕಾಲ ಭರ್ಜರಿ ಪ್ರದರ್ಶನ ಕಾಣುವ ಮೂಲಕ ದರ್ಶನ್ ಅವರನ್ನು ಎತ್ತರಕ್ಕೆ ತೆಗೆದುಕೊಂಡು ಹೋಯಿತು. ನಂತರ ಅದೇ ವರ್ಷದಲ್ಲಿ ʼಎಕ್ಸ್ ಕ್ಯೂಸ್ ಮಿʼ ನಿರ್ದೇಶಿಸಿದರು.

2007 ರಂದು ಬಿಡುಗಡೆಯಾದ ಇವರ ನಿರ್ದೇಶನದ ʼಜೋಗಿʼ ಸಿನಿಮಾ ಮತ್ತೊಂದು ದಾಖಲೆ ಬರೆದಿತ್ತು. ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಳನ್ನು ಕಂಡ ಪ್ರೇಮ್ 2007ರಲ್ಲಿ ʼಪ್ರೀತಿ ಏಕೆ ಭೂಮಿ ಮೇಲಿದೆʼ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದರು.ಸುಮಾರು 20 ವರ್ಷಗಳಿಂದ ನಿರ್ದೇಶಕನಾಗಿ, ಗಾಯಕನಾಗಿ ಹಾಗೂ ನಾಯಕ ನಟನಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದು ಅವರ ಹುಟ್ಟುಹಬ್ಬಕ್ಕೆ ನಟ – ನಟಿಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read