ಯಹೂದಿ ನಾಯಕಿ, ಡೆಟ್ರಾಯಿಟ್ ಸಿನಗಾಗ್ ನ ಅಧ್ಯಕ್ಷೆ ಸಮಂತಾ ವಾಲ್(40) ಅವರನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿದೆ.
ಸಮಂತಾ ಅವರು ಅಂತರ್ಧರ್ಮೀಯ ಕೆಲಸ ಮತ್ತು ಸ್ಥಳೀಯ ರಾಜಕೀಯದಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಶನಿವಾರ ಬೆಳಿಗ್ಗೆ(ಸ್ಥಳೀಯ ಕಾಲಮಾನ) ಡೆಟ್ರಾಯಿಟ್ನ ಲಫಯೆಟ್ಟೆ ಪಾರ್ಕ್ ನೆರೆಹೊರೆಯಲ್ಲಿರುವ ತನ್ನ ಮನೆಯ ಹೊರಗೆ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಆಕೆಯ ನಿವಾಸದವರೆಗೂ ಇದ್ದ ರಕ್ತದ ಕಲೆಗಳ ಹಾದಿಯನ್ನು ಅನುಸರಿಸಿ ಹೋದಾಗ ಮೃತದೇಹ ಪತ್ತೆಯಾಗಿದೆ, ಅನೇಕ ಇರಿತದ ಗಾಯಗಳೊಂದಿಗೆ ಕಂಡುಬಂದಿದ್ದಾರೆ. ಬಳಿಕ ವಾಲ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು, ಇದು ಸಮುದಾಯವನ್ನು ಆಘಾತ ಮತ್ತು ಶೋಕಕ್ಕೆ ತಳ್ಳಿದೆ.
ಸಮಂತಾ ವಾಲ್ ಅವರು 2022 ರಿಂದ ಐಸಾಕ್ ಅಗ್ರೀ ಡೌನ್ಟೌನ್ ಸಿನಗಾಗ್ನ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅತ್ಯುತ್ತಮ ಯುವ ನಾಯಕರಲ್ಲಿ ಒಬ್ಬರಾಗಿದ್ದರು. ಸ್ಥಳೀಯ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ತನಿಖೆ ಬಳಿಕ ಸಾವಿನ ರಹಸ್ಯ ಗೊತ್ತಾಗಲಿದೆ.