ಗಾಳಿ, ನೀರು, ಮಣ್ಣಿಗೆ ಹೇಗೆ ಬೇಧ ಭಾವ ಇಲ್ಲವೋ ಹಾಗೆ ನಾವು ಬಳಸುವ ಹಣಕ್ಕೂ ಯಾವುದೇ ಬೇಧ ಇಲ್ಲ. ಇಂದು ನಮ್ಮ ಕೈಯಲ್ಲಿ ಇರುವ ನೋಟು ನಾಳೆ ಮತ್ತೊಬ್ಬರ ಕೈ ಸೇರುತ್ತದೆ. ಈಗ ನಾವು ಕೈಲಿ ಹಿಡಿದಿರುವ ನೋಟು ಈ ಹಿಂದೆ ಯಾರ್ಯಾರ ಕೈ ದಾಟಿ ಬಂತು ಎಂದು ಟ್ರಾಕ್ ಮಾಡುವುದು ಖಂಡಿತಾ ಸಾಧ್ಯವಿಲ್ಲ.
ದೇಶಾದ್ಯಂತ ವೇಗವಾಗಿ ಚಲಾವಣೆಗೊಳ್ಳುವ ನಗದು ಹಣದಿಂದ ಸೋಂಕು ಹರಡಬಹುದು ಗೊತ್ತೇ ? ನೀವು ಗಮನಿಸಿರಬಹುದು, ನೋಟಿನ ಕಂತೆಯನ್ನು ಕೈಲಿ ಹಿಡಿದು ಎಣಿಸುವಾಗ, ನೋಟು ಸರಾಗವಾಗಿ ಚಲಿಸದೆ ಇದ್ದರೆ ಬಹಳಷ್ಟು ಜನರು ತಮ್ಮ ನಾಲಿಗೆಯಿಂದ ಬೆರಳನ್ನು ಒದ್ದೆ ಮಾಡಿ ಎಣಿಸುವ ವಾಡಿಕೆ ಮಾಡಿಕೊಂಡಿರುತ್ತಾರೆ. ಹೀಗೆ ಮಾಡುವಾಗ ಯಾವುದೇ ವ್ಯಕ್ತಿ ಕೆಮ್ಮು, ನೆಗಡಿ, ಜ್ವರ ಇಂತಹ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅಂಥವರ ನಾಲಿಗೆಯ ಉಗುಳಿಂದ ಸುಲಭವಾಗಿ ಸೋಂಕು ಹರಡಬಹುದು.
ಡಿಜಿಟಲ್ ವಹಿವಾಟು ಇದಕ್ಕೆಲ್ಲಾ ಪರಿಹಾರ ಕೊಡಬಲ್ಲದು. ಆದಷ್ಟು ಹಣವನ್ನು ನಗದು ರೂಪದಲ್ಲಿ ಬಳಸದೇ, ಡಿಜಿಟಲ್ ರೂಪದಲ್ಲಿ ಬಳಸುವುದು ಎಲ್ಲರಿಗೂ ಒಳಿತು.