ಮೈಸೂರು : ಮೈಸೂರಿನಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸಂಭ್ರಮ ಮನೆ ಮಾಡಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ದಾಂಗುಡಿ ಇಡುತ್ತಿದ್ದಾರೆ.
ದಸರಾ ಹಿನ್ನೆಲೆ ಮೈಸೂರಿನಲ್ಲಿ ನಾಳೆ ಏರ್ ಶೋ ನಡೆಯಲಿದ್ದು, ಇಂದು ರಿಹರ್ಸಲ್ ನಡೆಯಲಿದೆ.ಬನ್ನಿಮಂಟಪದ ಪಂಜಿನ ಕವಾಯಿತು ನಡೆಯುವ ಮೈದಾನದಲ್ಲಿ ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನದ ರಿಹರ್ಸಲ್ ನಡೆಯಲಿದೆ. ಸೂರ್ಯಕಿರಣ್ ತಂಡದಿಂದ ವೈಮಾನಿಕ ಪ್ರದರ್ಶನದ ರಿಹರ್ಸಲ್ ನಡೆಯಲಿದ್ದು ಇಂದು ವೀಕ್ಷಣೆಗೆ ಸಾರ್ವಜನಿಕರಿಗೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ಉಚಿತವಾಗಿ ವೀಕ್ಷಣೆ ಮಾಡ್ಬಹುದು, ಮಧ್ಯಾಹ್ನ 3 ಗಂಟೆಯ ಒಳಗೆ ಬಂದವರಿಗೆ ಮೈದಾನಕ್ಕೆ ಪ್ರವೇಶಕ್ಕೆ ಅವಕಾಶ ಹಾಗೂ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
ವಾಯು ಸೇನೆಯ ವಿವಿಧ ಯುದ್ಧ ವಿಮಾನಗಳು, ಲಘು ವಿಮಾನಗಳು ಏರ್ ಶೋ ನಲ್ಲಿ ಭಾಗವಹಿಸಲಿದ್ದು, ವಾಯುಸೇನೆಯ ಯೋಧರಿಂದ ಸಾಹಸ ಪ್ರದರ್ಶನ ನಡೆಯಲಿದೆ. ಅಕ್ಟೋಬರ್ 23 ರಂದು ಪ್ರದರ್ಶನವು ಪಾಸ್ ಹೊಂದಿರುವವರಿಗೆ ಮಾತ್ರ ತೆರೆದಿರುತ್ತದೆ. ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪಾಸ್ಗಳನ್ನು ಪಡೆದುಕೊಂಡು ಏರ್ ಶೋ ವೀಕ್ಷಿಸಬಹುದು.