ಗಮನಿಸಿ: ಯೂಸರ್ ಮಾನ್ಯುಯಲ್ ಅನ್ನು ಕಡೆಗಣಿಸಬೇಡಿ….!

How to Write a User Manual | Zenkit

ಯಾವುದೇ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗಲೂ ಕಂಪನಿಯವರು ಬಳಕೆದಾರರ ಕೈಪಿಡಿ ಅಂದರೆ ಯೂಸರ್ ಮಾನ್ಯುಯಲ್ ಅನ್ನು ಕೊಟ್ಟಿರುತ್ತಾರೆ.

ಆದರೆ ಸಾಮಾನ್ಯವಾಗಿ ಎಲ್ಲರೂ ಹೊಸ ಉಪಕರಣಗಳನ್ನು ನೋಡುವ ಹಾಗೂ ಬಳಸುವ ಆತುರದಲ್ಲಿ ಈ ಬಳಕೆದಾರರ ಕೈಪಿಡಿಯನ್ನು ಗಮನಿಸುವುದೇ ಇಲ್ಲ. ಎಷ್ಟೋ ಜನರು ಇದನ್ನು ಮಾರನೇ ದಿನವೇ ಕಸಕ್ಕೆ ಎಸೆಯುವುದುಂಟು.

ಎಲ್ಲಿಯವರೆಗೆ ನೀವು ಕೊಂಡ ಉಪಕರಣವನ್ನು ಬಳಸುತ್ತಾ ಇರುತ್ತೀರೋ ಅಲ್ಲಿಯವರೆಗೂ ನೀವು ಈ ಕೈಪಿಡಿಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ಒಂದೆರಡು ವರ್ಷಗಳ ಅವಧಿಯಲ್ಲಿ ಉಪಕರಣವನ್ನು ಬಳಸುವ ಸಮಯದಲ್ಲಿ ಯಾವುದೇ ಸಮಸ್ಯೆ ಅಥವಾ ಲೋಪದೋಷ ಕಂಡುಬಂದಾಗ ತಕ್ಷಣ ಯೂಸರ್ ಮ್ಯಾನವಲ್ ನಲ್ಲಿ ಅದಕ್ಕೆ ಪರಿಹಾರ ಸಿಗಬಹುದು.

ಯಾವುದೇ ಉಪಕರಣದ ಹೆಚ್ಚುವರಿ ಕೌಶಲ್ಯ ತಿಳಿಯುವುದು ಇದೇ ಕೈಪಿಡಿಯಿಂದ. ನೀವು ಖರೀದಿಸಿದ ಪದಾರ್ಥದ ಎಲ್ಲಾ ಬಿಡಿ ಭಾಗಗಳು ಸರಿಯಾಗಿದೆಯೇ ಎಂದು ಕ್ರಾಸ್ ಚೆಕ್ ಸಹ ಇದರಿಂದ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read