ಬಳ್ಳಾರಿ: 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಪುರುಷ ಮತ್ತು ಮಹಿಳೆ, ತೃತೀಯ ಲಿಂಗ ಪುರುಷ ಮತ್ತು ಮಹಿಳೆ ಹಾಗೂ ಸೇವಾನಿರತ, ಬ್ಯಾಕ್‍ಲಾಗ್ – 454 ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆಯು ನ.05 ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಬಳ್ಳಾರಿ ನಗರದ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಅವರು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಹೆಸರು ಮತ್ತು ವಿಳಾಸ
ಗಾಂಧಿನಗರ 2ನೇ ಕ್ರಾಸ್‍ನ ಬಾಲ ಭಾರತಿ ಶಾಲೆ, ಸಿರುಗುಪ್ಪ ರಸ್ತೆಯ ಕುರಿಹಟ್ಟಿಯ ಬಳ್ಳಾರಿ ಬಿಸಿನೆಸ್ ಕಾಲೇಜು, ಪಟೇಲ್ ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಮತ್ತು ಕಾಲೇಜು, ರಿಸರ್ವ್ ಪೊಲೀಸ್ ಮೈದಾನ ಎದುರಿನ ಎಂ.ಜಿ.ಎಂ. ಪ್ರಾಥಮಿಕ ಮತ್ತು ಪ್ರೌಢಶಾಲೆ, ಪಟೇಲ್ ನಗರದ ನಂದಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಸೈನ್ಸ್ ಕಾಲೇಜು, ಹಂಸಭಾವಿಯ ನ್ಯೂ ಶ್ರೀ ಚೈತನ್ಯ ಪಿ.ಯು.ಕಾಲೇಜು, ಕಂಟೋನ್‍ಮೆಂಟ್‍ನ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ ಎಂಜಿನಿಯರಿಂಗ್ ಕಾಲೇಜು, ವೈ.ನಾಗೇಶ ಶಾಸ್ತ್ರಿ ನಗರದ ಎಸ್‍ಜಿ ಪದವಿ ಪೂರ್ವ ಕಾಲೇಜು, ಕೋಟೆ ಪ್ರದೇಶದ ಶ್ರೀಮೇಧಾ ಪದವಿ ಕಾಲೇಜು, ಎಸ್‍ಎನ್ ಪೇಟೆಯ ಸರಳಾದೇವಿ ಸತೀಶ್ಚಂದ್ರ ಅಗರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕಾಳಮ್ಮ ಬೀದಿಯ ವಾಡ್ರ್ಲಾ ಸಂಯುಕ್ತ ಪದವಿ ಪೂರ್ವ ಕಾಲೇಜು.
ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್‍ನಿಂದ ಲಿಖಿತ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಪಡೆದುಕೊಂಡು, ಯಾವುದಾದರೊಂದು ಮೂಲ ಗುರುತಿನ ಚೀಟಿಯನ್ನು ತಪ್ಪದೇ ಜೊತೆಯಲ್ಲಿ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ವಿದ್ಯುನ್ಮಾನ ಮತ್ತು ಇತರೆ ಉಪಕರಣಗಳನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.