ಗಾಝಾ : ಇದೇ ಮೊದಲ ಬಾರಿಗೆ ಗಾಝಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರು ಔದಾರ್ಯ ತೋರಿಸುವ ಬಗ್ಗೆ ಮಾತನಾಡಿದ್ದಾರೆ. ಹಮಾಸ್ ನ ಈ ಹೃದಯ ಬದಲಾವಣೆಯಿಂದ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಈವರೆಗೆ ನೂರಾರು ಇಸ್ರೇಲಿಗಳು ಮತ್ತು ಅಮೆರಿಕನ್ ನಾಗರಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡು ಅವರನ್ನು ಕೊಂದಿರುವ ಹಮಾಸ್ ಮಾನವೀಯತೆಯ ಬಗ್ಗೆ ಮಾತನಾಡಿದೆ.
ಇಬ್ಬರು ಅಮೆರಿಕನ್ ನಾಗರಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಹೇಳಿಕೊಂಡಿದೆ. ಕತಾರ್ ಮಧ್ಯಸ್ಥಿಕೆಯ ನಂತರ ಮಾನವೀಯ ನೆಲೆಯಲ್ಲಿ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ ಮಿಲಿಟರಿ ಘಟಕದ ವಕ್ತಾರ ಅಬು ಉಬೈದಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಮಾಸ್ನ ಮಿಲಿಟರಿ ವಿಭಾಗ ಅಲ್-ಖಾಸ್ಸಾಮ್ ಬ್ರಿಗೇಡ್ಸ್ನ ವಕ್ತಾರ ಅಬು ಉಬೈದಾ ಅವರು ಗಾಝಾದಿಂದ ಇಬ್ಬರು ಯುಎಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದನ್ನು ಶುಕ್ರವಾರ ದೃಢಪಡಿಸಿದ್ದಾರೆ. ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ನಲ್ಲಿ ನಡೆದ ಮಾರಣಾಂತಿಕ ದಾಳಿಯಲ್ಲಿ ಸುಮಾರು 200 ಜನರನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿರುವುದಾಗಿ ಹಮಾಸ್ ಹೇಳಿಕೊಂಡಿದೆ.
ಇನ್ನೂ 50 ಜನರನ್ನು ಇತರ ಸಶಸ್ತ್ರ ಗುಂಪುಗಳು ಬಂಧಿಸಿವೆ ಎಂದು ಹಮಾಸ್ ಹೇಳಿದೆ. ಇಸ್ರೇಲಿ ವಾಯು ದಾಳಿಯಲ್ಲಿ 20 ಕ್ಕೂ ಹೆಚ್ಚು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.