alex Certify ಹೃದಯಾಘಾತ, ಪಾರ್ಶ್ವವಾಯು ಅಪಾಯ ತಡೆಗೆ ಮಹತ್ವದ ಕ್ರಮ: ದುಬಾರಿ ಬೆಲೆಯ ಇಂಜೆಕ್ಷನ್ ಉಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತ, ಪಾರ್ಶ್ವವಾಯು ಅಪಾಯ ತಡೆಗೆ ಮಹತ್ವದ ಕ್ರಮ: ದುಬಾರಿ ಬೆಲೆಯ ಇಂಜೆಕ್ಷನ್ ಉಚಿತ

ಬೆಂಗಳೂರು: ಪಾರ್ಶ್ವವಾಯು, ಹೃದಯಾಘಾತದ ಅಪಾಯ ತಡೆಗೆ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ದುಬಾರಿ ಬೆಲೆಯ ಚುಚ್ಚುಮದ್ದುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು.

ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಒಳಗಾದ ಸಂದರ್ಭದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಲು ಅಗತ್ಯವಿರುವ ಹೆಚ್ಚಿನ ಬೆಲೆಯ ಚುಚ್ಚುಮದ್ದುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಪಾಶ್ವವಾಯು ನಿರ್ವಹಣೆಗೆ ಅಗತ್ಯವಿರುವ 60 ಸಾವಿರ ರೂ. ದರದ ಆರ್.ಟಿ. ಪ್ಲಸ್ ಚುಚ್ಚುಮದ್ದು, ಹೃದಯಾಘಾತ ನಿರ್ವಹಣೆಗೆ ನೀಡುವ 40 ಸಾವಿರ ರೂ. ದರದ ಟೆನೆಕ್ಟ್ ಪ್ಲಸ್ ಚುಚ್ಚುಮದ್ದುಗಳನ್ನು ತಾಲೂಕು ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುವುದು.

ಈ ಚುಚ್ಚುಮದ್ದುಗಳು ಸರ್ಕಾರಿ ವ್ಯವಸ್ಥೆಯಡಿ ನಿಮಾನ್ಸ್ ಮತ್ತು ಜಯದೇವ ಹೃದ್ರೋಗ ಸಂಸ್ಥೆ ಹೊರತುಪಡಿಸಿ ಬೇರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುತ್ತಿರಲಿಲ್ಲ. ಇದರಿಂದಾಗಿ ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸುವ ಅನಿವಾರ್ಯತೆ ಇದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹೃದಯ ಸ್ನಾಯುವಿನ ಸೋಂಕು ನಿವಾರಣೆ ಯೋಜನೆ(ಸ್ಟೆಮಿ) ಯನ್ನು ರಾಜ್ಯದಲ್ಲಿ ಕಾರ್ಯಗತಗೊಳಿಸಲಾಗಿದ್ದು, ಈ ಯೋಜನೆಯಡಿ ಪಾರ್ಶ್ವವಾಯು, ಹೃದಯ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ಚುಚ್ಚುಮದ್ದು ಅಗತ್ಯ ಇರುವ ಎಲ್ಲರಿಗೂ ಸ್ಟೆಮಿ ಯೋಜನೆಯಡಿ ಉಚಿತವಾಗಿ ಆರೋಗ್ಯ ಇಲಾಖೆ ಚುಚ್ಚುಮದ್ದುಗಳನ್ನು ಒದಗಿಸಲಿದೆ. ಇದಕ್ಕಾಗಿ ಎಪಿಎಲ್, ಬಿಪಿಎಲ್ ಎಂದು ವಿಂಗಡಿಸದೆ ಪಾರ್ಶ್ವವಾಯು ಹೃದಯಾಘಾತಕ್ಕೆ ಒಳಗಾದವರ ಪರೀಕ್ಷೆ ನಡೆಸಿ ಚುಚ್ಚುಮದ್ದು ನೀಡಲಾಗುವುದು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...