ಬೆಂಗಳೂರು : ನನ್ನನ್ನು ಒಂದು ದಿನ ಸಹ ವಿಚಾರಣೆ ಮಾಡಲೇ ಇಲ್ಲ, 90% ತನಿಖೆ ಪೂರ್ಣ ಹೇಗೆ ಆಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಕೇಂಪೇಗೌಡ ಏರ್ಪೋರ್ಟ್ನಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.ಪ್ರಕರಣದಲ್ಲಿ ಎಫ್ಐಆರ್ ಹಾಕಿರೋದು ಸರಿ ಇಲ್ಲ ಅಂತ ನ್ಯಾಯಾಲಯಕ್ಕೆ ಹೋಗಿದ್ದೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಸಿಬಿಐಗೆ ತನಿಖೆಗೆ ಅವಕಾಶ ಕೊಟ್ಟಿದ್ರು. ಈಗ 90% ರಷ್ಟು ತನಿಖೆ ಪೂರ್ಣ ಆಗಿದೆ ಅಂತ ಹೇಳಿದ್ದಾರೆ. ನನ್ನ ಒಂದು ದಿನ ಸಹ ವಿಚಾರಣೆಗೆ ಕರೆಸಿಲ್ಲ 90% ತನಿಖೆ ಪೂರ್ಣ ಹೇಗೆ ಆಗುತ್ತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ಕರೆದು ನನ್ನ ಆಸ್ತಿಯನ್ನು ಕೇಳಬೇಕು. ನನ್ನ ಆಸ್ತಿ ಯಾವುದು? ನನ್ನ ಹೆಂಡತಿಯ ಆಸ್ತಿ ಯಾವುದು ಅಂತ ಕೇಳಬೇಕು, ಅದು ಹೇಗೆ ತನಿಖೆ ಮಾಡಿದ್ದಾರೆ ಗೊತ್ತಿಲ್ಲ, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ನೋಡೋಣ ಮುಂದೇನಾಗುತ್ತದೆ ಅಂತ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದ್ದು, 3 ತಿಂಗಳಲ್ಲಿ ತನಿಖೆ ನಡೆಸುವಂತೆ ಸೂಚನೆ ನೀಡಿದೆ.ತನಿಖೆಗೆ ತಡೆ ಕೋರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಡಿಕೆಶಿ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿದೆ.ಮುಂದಿನ ಮೂರು ತಿಂಗಳವೊಳಗೆ ಪ್ರಕರಣದ ತನಿಖೆಯನ್ನು ಮುಗಿಸಬೇಕು ಎಂದು ಸಿಬಿಐಗೆ ಸೂಚನೆ ನೀಡಿದೆ.