ಬೆಂಗಳೂರು : ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಬಿಗ್ ಶಾಕ್, ಮಂಗಳವಾರ ಗೋಧಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಹಬ್ಬದ ಋತುವಿನಲ್ಲಿ ಗೋಧಿಗೆ ಹೆಚ್ಚಿನ ಬೇಡಿಕೆ ಹಿನ್ನೆಲೆಯಲ್ಲಿ ಗೋಧಿ ಬೆಲೆಯಲ್ಲಿ ಮಂಗಳವಾರ ಶೇ. 1.6 ರಷ್ಟು ಏರಿಕೆಯಾಗಿದ್ದು, ಮೆಟ್ರಿಕ್ ಟನ್ ಗೆ 27,390 ರೂ.ತಲುಪಿದೆ. ಇದು ಕಳೆದ 8 ತಿಂಗಳಲ್ಲಿ ಗರಿಷ್ಠ ಮಟ್ಟವಾಗಿದೆ. ಈವರೆಗೆ ಗೋಧಿ ದರವು ಸುಮಾರು 22 ಪರ್ಸೆಂಟ್ ಏರಿಕೆಯಾಗಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುಆಗಿದೆ.
ಪರಿಸ್ಥಿತಿ ಇದೇ ರೀತಿ ಮುಂದುವರೆದ್ರೆ ಮುಂದಿನ ದಿನಗಳಲ್ಲಿ ಗೋಧಿ ಬೆಲೆಗಳು ಪ್ರತಿ ಮೆಟ್ರಿಕ್ ಟನ್ ಗೆ 30,000 ರೂ. ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಗೋಧಿ ಜೊತೆಗೆ ಅಕ್ಕಿಯ ಬೆಲೆಯೂ ಏರಿಕೆಯಾಗಿದ್ದು, 25 ಕೆಜಿ ಅಕ್ಕಿ ಮೂಟೆ ಬೆಲೆ 1,200 ರೂ.ನಿಂದ 1500-1600 ರೂ.ವರೆಗೆ ಏರಿಕೆಯಾಗಿದೆ.