ಖಾನ್ ಯೂನಿಸ್(ಗಾಜಾ ಸ್ಟ್ರಿಪ್): ಗಾಜಾದಲ್ಲಿ ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದ ಇಸ್ರೇಲ್ ಭೀಕರ ಹತ್ಯಾಕಾಂಡ ನಡೆಸಿದೆ.
ಗಾಯಾಳುಗಳು ಮತ್ತು ಇತರ ಪ್ಯಾಲೆಸ್ಟೀನಿಯಾದವರಿಂದ ತುಂಬಿದ ಗಾಜಾ ನಗರದ ಆಸ್ಪತ್ರೆಯಲ್ಲಿ ಮಂಗಳವಾರ ಭಾರಿ ಸ್ಫೋಟ ಸಂಭವಿಸಿದ್ದು, 500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಹಮಾಸ್ ಇಸ್ರೇಲಿ ವೈಮಾನಿಕ ದಾಳಿಯನ್ನು ದೂಷಿಸಿದೆ. ಆದರೆ ಇಸ್ರೇಲಿ ಮಿಲಿಟರಿ ಇದು ಪ್ಯಾಲೆಸ್ಟೀನಿಯನ್ ಉಗ್ರಗಾಮಿಗಳು ತಪ್ಪಾಗಿ ಹಾರಿಸಿದ ರಾಕೆಟ್ ದಾಳಿ ಎಂದು ಹೇಳಿದೆ. ದಾಳಿಯಲ್ಲಿ ಕನಿಷ್ಠ 500 ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲಿನ ದಾಳಿಯು ಅಂತರರಾಷ್ಟ್ರೀಯ ಖಂಡನೆಗೆ ಕಾರಣವಾಗಿದೆ.
“ಇದು ಅತಿರೇಕದ ಮತ್ತು ಮತ್ತೊಮ್ಮೆ ಇದು ನಾಗರಿಕರ ಜೀವನದ ಬಗ್ಗೆ ಸ್ಪಷ್ಟವಾದ ನಿರ್ಲಕ್ಷ್ಯವನ್ನು ತೋರಿಸುತ್ತದೆ” ಎಂದು ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ ಇನ್ ನಿಯರ್ ಈಸ್ಟ್ (UNRWA) ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.
ಜೋರ್ಡಾನ್ ರಾಜ ಅಬ್ದುಲ್ಲಾ II, ದಾಳಿಯನ್ನು “ಹತ್ಯಾಕಾಂಡ” ಮತ್ತು “ಮಾನವೀಯತೆಯ ಅವಮಾನ” ಎಂದು ಕರೆದರು.
ನಾಗರಿಕರಿಗೆ ಆಶ್ರಯ ನೀಡುವಲ್ಲಿ ಆಸ್ಪತ್ರೆಯು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಗಾಜಾ ಆರೋಗ್ಯ ಸಚಿವಾಲಯವು ಹೇಳಿಕೆಯನ್ನು ನೀಡಿತು.
ಇಸ್ರೇಲ್ ಆಸ್ಪತ್ರೆ ಮೇಲೆ ಬಾಂಬ್ ಸುರಿಮಳೆ ಸುರಿಸಿದೆ. ಆಸ್ಪತ್ರೆ ಮೇಲೆ ನಡೆದ ಭೀಕರ ದಾಳಿಯಲ್ಲಿ ಪುಟ್ಟ ಮಕ್ಕಳು ಸೇರಿ 500ಕ್ಕೂ ಹೆಚ್ಚು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೀವ ಉಳಿಸಿಕೊಳ್ಳಲು ಜನ ಪರದಾಟ ನಡೆಸುವಂತಾಗಿದೆ.