ದೆಹಲಿ: ವಿಭಿನ್ನ ಲಿಂಗಿ, ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ನಿಯಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಸಲಿಂಗ ವಿವಾಹಗಳಿಗೆ ಕಾನೂನು ಸ್ಥಾನಮಾನ ನೀಡುವ ಬಗೆಗಿನ ತೀರ್ಪು ಪ್ರಕಟಿಸುತ್ತಿರುವ ವೇಳೆ ಅವಿವಾಹಿತ ದಂಪತಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (CARA) ನಿಯಂತ್ರಣವನ್ನು ಇಂದು ರದ್ದುಗೊಳಿಸಿದೆ. ವಿಭಿನ್ನಲಿಂಗಿ, ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿಯಮಗಳು ತಡೆಯುವಂತಿಲ್ಲ ಎಂದು ತೀರ್ಪು ಪ್ರಕಟಿಸಿದೆ.
ಹೌದು, ವಿಭಿನ್ನ ಲಿಂಗಿ ಮತ್ತು ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸಿದ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (CARA) ನಿಯಂತ್ರಣವನ್ನು ಮಂಗಳವಾರ ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ತೀರ್ಪಿನಲ್ಲಿ ರದ್ದುಗೊಳಿಸಿದೆ. ಅದನ್ನು ಅಸಂವಿಧಾನಿಕ ಎಂದು ವಿವರಿಸಿದೆ.
ಮುಖ್ಯ ನ್ಯಾಯಮೂರ್ತಿ, ಡಿವೈ ಚಂದ್ರಚೂಡ್ ನೇತೃತ್ವದ ಐದು ಸದಸ್ಯರ ಪೀಠವು, ವಿಭಿನ್ನ ವಿವಾಹಿತ ದಂಪತಿಗಳು ಉತ್ತಮ ಪೋಷಕರಾಗಬಹುದು ಎಂದು ಭಾವಿಸುವುದು ಆಧಾರರಹಿತ ಮತ್ತು ತಾರತಮ್ಯವಾಗಿದೆ ಎಂದು ಒತ್ತಿ ಹೇಳಿದ್ರು. ಈ ತೀರ್ಪು ಪಿತೃತ್ವದ ಬಗ್ಗೆ ಪೂರ್ವಭಾವಿ ಕಲ್ಪನೆಗಳನ್ನು ಪ್ರಶ್ನಿಸುತ್ತದೆ.
CARA, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ದತ್ತು ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಅವಿವಾಹಿತ ದಂಪತಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಕಾನೂನು ಸ್ಪಷ್ಟವಾಗಿ ತಡೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಮಗುವಿನ ಹಿತದೃಷ್ಟಿಯಿಂದ ಈ ನಿರ್ಬಂಧದ ಅಗತ್ಯವನ್ನು ಬೆಂಬಲಿಸುವ ಯಾವುದೇ ಪುರಾವೆಗಳಿಲ್ಲದೆ ಅವರನ್ನು ಹೊರಗಿಡುವ ಮೂಲಕ CARA ತನ್ನ ಅಧಿಕಾರವನ್ನು ಮೀರಿದೆ ಎಂದು ನ್ಯಾಯಮೂರ್ತಿ ಟೀಕಿಸಿದ್ರು.
ವಿಭಿನ್ನ ಲಿಂಗಿ ಜೋಡಿಗಳನ್ನು ದತ್ತು ತೆಗೆದುಕೊಳ್ಳುವುದನ್ನು ಹೊರತುಪಡಿಸಿ CARA ದ ಸುತ್ತೋಲೆಯು ಸಂವಿಧಾನದ 15 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.