Mysore Dasara : ಮೈಸೂರು ದಸರಾದಲ್ಲಿ`ನಾದಬ್ರಹ್ಮ ಹಂಸಲೇಖ’ ಭಾಷಣದ ಹೈಲೈಟ್ಸ್

ಮೈಸೂರು : ಮೈಸೂರು ಚಾಮುಂಡಿ ಬೆಟ್ಟದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾಗೆ ಸಂಗೀತ ನಿರ್ದೇಶಕ ಹಂಸಲೇಖ ಅಧಿಕೃತ ಚಾಲನೆ ನೀಡಿದ್ದಾರೆ. 

ಮೈಸೂರು ದಸರಾಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನಮನ . ಈ ಅವಕಾಶಕ್ಕಾಗಿ ನಾನು ಸಾವಿರಾರು ಮೆಟ್ಟಿಲುಗಳನ್ನು ಹತ್ತಿ ಬಂದಿದ್ದೇನೆ. ಅಪ್ಪ ಗೋವಿಂದರಾಜು, ಅವ್ವ ರಾಜಮ್ಮ ನೆನೆಯಲೇ? ನನ್ನ 50 ವರ್ಷದ ಹಾದಿಯಲ್ಲಿ ಈ ಅವಕಾಶ ಸಿಕ್ಕಿದೆ ಎಂದರು.

ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು. ಕರ್ನಾಟಕ  ಏಕೀಕರಣವಾಗಿ ಐವತ್ತುವರ್ಷ ವಾಯಿತು.ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷವಾಗಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ  ಬಹಳ ಬೆಲೆ ಬಾಳುವಂತಹದ್ದು. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದು ಹೇಳಿದರು.

ದಸರಾ ಎನ್ನುವುದು ಜೀವಂತ ಮಹಾಕಾವ್ಯ. ದಕ್ಷಿಣ ಭಾರತದ ವೀರರ ಕಥೆಯೆ ಈ ಮಹಾಕಾವ್ಯ, ವಿಜಯನಗರದ ಮಹಾಸಾಮ್ರಾಜ್ಯದಿಂದ ಆರಂಭವಾಗಿದೆ. ದಸರಾ ಒಂದು ರೀತಿ ಕಥಾ ಕಣಜ. ಇದು ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು ಅಭಿವೃದ್ಧಿ ನಮ್ಮ ಕೃತಿ ಆಗಬೇಕು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read