ಮಂಗಳೂರು: ಇಸ್ರೇಲ್ ನಲ್ಲಿ ನರಮೇಧ ನಡೆಸಿದ ಹಮಾಸ್ ಬೆಂಬಲಿಸಿದ ಜಾಕೀರ್ ವಿರುದ್ಧ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೋಪಿ ಜಾಕಿರ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.
ಮಂಗಳೂರು ಉತ್ತರ ಠಾಣೆಯಲ್ಲಿ ಈತನ ವಿರುದ್ಧ ಈಗಾಗಲೇ 7 ಕೇಸ್ ಗಳು ಇವೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ಹಮಾಸ್ ಉಗ್ರರ ದಾಳಿ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿ ಜಾಕಿರ್ ವಿಡಿಯೋ ಹರಿಬಿಟ್ಟಿದ್ದ. ಮಂಗಳೂರಿನ ಬಂದರು ಜಿಎಂ ರಸ್ತೆ ನಿವಾಸಿಯಾಗಿರುವ ಜಾಕೀರ್, ಹಮಾಸ್ ಬಂಡುಕೋರರನ್ನು ದೇಶಪ್ರೇಮಿಗಳು ಎಂದು ಕರೆದಿದ್ದ. ಹಮಾಸ್ ಬಂಡುಕೋರರ ಜಯಕ್ಕೆ ಪ್ರಾರ್ಥನೆ ಮಾಡುವಂತೆ ಹೇಳಿದ್ದ. ಪ್ಯಾಲೇಸ್ತೀನ್, ಗಾಜಾಪಟ್ಟಿ, ಹಮಾಸ್ ಗೆ ಜಯವಾಗಲಿ ಎಂದು ಪ್ರಾರ್ಥಿಸುವಂತೆ ಕರೆ ನೀಡಿದ್ದ. ವಿಶ್ವ ಖಬರಸ್ಥಾನ ಸಂಘದವರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ್ದ. ಏರಿಯಾದಲ್ಲಿ ತಾಲಿಬಾನ್ ಹೆಸರಲ್ಲಿ ಜಾಕೀರ್ ಗುರುತಿಸಿಕೊಂಡಿದ್ದಾನೆ. ಜಾಕಿರ್ ವಿಡಿಯೋಗೆ ಹಿಂದೂಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು.