ದಾವಣಗೆರೆ: ಮದ್ಯದಂಗಡಿಗೆ ಪರವಾನಿಗೆ ನೀಡಲು ಲಂಚ ಸ್ವೀಕರಿಸುತ್ತಿದ್ದಾಗಲೇ ದಾವಣಗೆರೆ ಅಬಕಾರಿ ಡಿಸಿ, ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ದಾವಣಗೆರೆ ಅಬಕಾರಿ ಡಿಸಿ ಸ್ವಪ್ನಾ, ಹರಿಹರ ಅಬಕಾರಿ ಇನ್ಸ್ ಪೆಕ್ಟರ್ ಶೀಲಾ, ಕಚೇರಿ ಸಿಬ್ಬಂದಿಗಳಾದ ಹೆಚ್.ಎಂ.ಅಶೋಕ್ ಹಾಗೂ ಶ್ರೀಶೈಲಾ ಲೋಕಾಯುಕ್ತ ಬಲೆಗೆ ಬಿದ್ದವರು.
ಮದ್ಯದ ಅಂಗಡಿ ಆರಂಭಿಸುವುದಕ್ಕೆ ಪರವಾನಗಿ ನೀಡಲು ಹರಿಹರ ಮೂಲದ ರಂಗನಾಥ್ ಎಂಬುವವರಿಂದ 3 ಲಕ್ಷ ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಬ್ಬಂದಿ ಅಶೋಕ್ ಮೂಲಕವಾಗಿ ಅಬಕಾರಿ ಡಿಸಿ ಸ್ವಪ್ನಾ ಲಂಚ ಸ್ವೀಕಿಸುತ್ತಿದ್ದರು, ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.