ನವದೆಹಲಿ : ನಕಲಿ ದಾಖಲೆಗಳನ್ನು ಬಳಸಿಕೊಂಡು ಅನಿವಾಸಿಗಳು ಸೇರಿದಂತೆ ಅನರ್ಹ ವ್ಯಕ್ತಿಗಳಿಗೆ ಪಾಸ್ಪೋರ್ಟ್ ನೀಡಿದ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನು ಒಳಗೊಂಡ 24 ಜನರ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.
ಪಶ್ಚಿಮ ಬಂಗಾಳ ಮತ್ತು ಗ್ಯಾಂಗ್ಟಾಕ್ನ 50 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸುತ್ತಿದೆ. ಗ್ಯಾಂಗ್ಟಾಕ್ನಲ್ಲಿ ಅಧಿಕಾರಿ ಮತ್ತು ಮಧ್ಯವರ್ತಿಯನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ.
ಲಂಚಕ್ಕೆ ಬದಲಾಗಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಅನರ್ಹ ವ್ಯಕ್ತಿಗಳಿಗೆ ಪಾಸ್ಪೋರ್ಟ್ ನೀಡುತ್ತಿದ್ದ 16 ಅಧಿಕಾರಿಗಳು ಸೇರಿದಂತೆ 24 ವ್ಯಕ್ತಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಕೋಲ್ಕತ್ತಾ, ಸಿಲಿಗುರಿ, ಗ್ಯಾಂಗ್ಟಾಕ್ ಮತ್ತು ಇತರ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಹೇಳಲಾಗಿದೆ.