ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ನೇತೃತ್ವದಲ್ಲಿ ಇಂದು ಡಿಸಿಎಂ ಡಿಕೆಶಿ ಅವರನ್ನು ಭೇಟಿಯಾಗಿದ್ದು, ವ್ಯಾಟ್, ಚಿತ್ರಮಂದಿರದ ಟ್ಯಾಕ್ಸ್ ಬಗ್ಗೆ ಮನವಿ ಮಾಡಿದ್ದಾರೆ. ಮನವಿ ಸ್ವೀಕರಿಸಿದ ಡಿಸಿಎಂ ಡಿಕೆಶಿ ಎಲ್ಲಾ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ನಂತರ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ಡಿಸಿಎಂ ಡಿಕೆಶಿ ಅವರು ಬ್ಯುಸಿ ಇದ್ದರೂ ನಮ್ಮ ಜೊತೆ ಮಾತನಾಡಿದ್ದಾರೆ. ಥಿಯೇಟರ್ ಟ್ಯಾಕ್ಸ್ , ವ್ಯಾಟ್ ಸೇರಿದಂತೆ ಎಲ್ಲಾ ಸಮಸ್ಯೆ ಬಗೆಹರಿಸುತ್ತೇನೆ. ಚಿತ್ರೋದ್ಯಮ ನಮಗೆ ಆಸ್ತಿ ಇದ್ದಂತೆ, ನಿಮಗೆ ಏನು ಬೇಕು ಅದನ್ನು ಮಾಡಿಕೊಡುತ್ತೇವೆ ಎಂದರು. ಹಳೆ ಟ್ಯಾಕ್ಸ್ ಕಟ್ಟುವಂತೆ ಕೆಲವು ನಿರ್ಮಾಪಕರಿಗೆ ನೋಟಿಸ್ ಬಂದಿದೆ. ಈ ಬಗ್ಗೆ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದರು.